ನವದೆಹಲಿ: ಕಳೆದ 9 ತಿಂಗಳುಗಳಿಂದ ಭಾರತ-ಚೀನಾ ಗಡಿಯ ಪೂರ್ವ ಲಡಾಕ್ ನಲ್ಲಿ ನಿಯೋಜನೆಗೊಂಡಿದ್ದ ಯುದ್ಧ ವಾಹನಗಳನ್ನು ಎರಡೂ ಕಡೆಗಳಲ್ಲಿ ಹಿಂಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಸದ್ಯ ಗಡಿಯಲ್ಲಿ ಸಶಸ್ತ್ರ ಸೇನಾಪಡೆಗಳನ್ನು ಮಾತ್ರ ನಿಯೋಜಿಸಲಾಗಿದ್ದು ಬೇರೆ ಪಡೆಗಳನ್ನು ಹಿಂಪಡೆಯಲಾಗಿದೆ ಎಂದು ಭಾರತ ಹೇಳಿದರೆ, ಇನ್ನು ಮುಂಚೂಣಿ ಯುದ್ಧ ವಾಹನ ಪಡೆಗಳನ್ನು ಪಾಂಗೊಂಗ್ ಟ್ಸೊ ಪ್ರದೇಶದಲ್ಲಿ ಹಿಂಪಡೆಯಲಾಗಿದೆ ಎಂದು ಚೀನಾ ರಾಷ್ಟ್ರೀಯ ರಕ್ಷಣಾ ಸಚಿವಾಲಯ ಹೇಳಿದ್ದು, ಈ ಮೂಲಕ ನಿಧಾನವಾಗಿ ಸೇನೆಯನ್ನು ಹಿಂತೆಗೆದುಕೊಳ್ಳುವ ಕೆಲಸವನ್ನು ಎರಡೂ ದೇಶಗಳು ಆರಂಭಿಸಿದೆ.

ಕಳೆದ ನಡೆದಿದ್ದ ಬಾರಿ ಚೀನಾ-ಭಾರತ ಕಾಪ್ರ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಆದ ಒಪ್ಪಂದ, ಸಹಮತದಂತೆ ಸೇನೆಯನ್ನು ಎರಡೂ ದೇಶಗಳು ಹಿಂಪಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಭಾರತದ ಕಡೆಯಿಂದ ಸಶಸ್ತ್ರ ಸೇನಾ ವಾಹನವನ್ನು, ಕಾಲಾಳು ಯುದ್ಧ ವಾಹನವನ್ನು ಹಿಂಪಡೆಯಲಾಗಿದೆ. ಸೇನಾ ವಾಹನವನ್ನು ಹಿಂಪಡೆಯಲಾಗಿದೆ ಆದರೆ ಮುಂಚೂಣಿ ಸೇನಾಪಡೆಯನ್ನು ಹಿಂತೆಗೆದುಕೊಂಡಿಲ್ಲ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಂತ ಹಂತವಾಗಿ ಸೇನೆ ಹಿಂಪಡೆಯುವ ಪ್ರಕ್ರಿಯೆ ನಡೆಯಲಿದೆ. ಕಾಲಾಳು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಕೊನೆ ಹಂತದಲ್ಲಿ ನಡೆಯಲಿದೆ. ಚೀನಾ ಯಾವ ರೀತಿ ಸೇನೆ ಹಿಂಪಡೆಯುತ್ತದೆ ಎಂಬುದರ ಆಧಾರದ ಮೇಲೆ ಭಾರತದ ಸೇನೆಯನ್ನು ವಾಪಾಸ್ ಕರೆಸಿಕೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
   
ಇನ್ನು ಚೀನಾ ರಾಯಭಾರಿ ಸುನ್ ವೈಡೊಂಗ್ ಭಾರತಕ್ಕೆ ಬರೆದ ಲೇಖನವೊಂದರಲ್ಲಿ ಗಡಿ ಸಮಸ್ಯೆಯನ್ನು ಬರೆ ಹರಿಸುವ ಕುರಿತು ಪ್ರಸ್ತಾಪಿಸಿದ್ದು,  ದ್ವಿಪಕ್ಷೀಯ ಸಂಬಂಧ ಕುರಿತಂತೆ ಸೂಕ್ತ ಸಮಯದಲ್ಲಿ ಗಡಿ ವಿವಾದವನ್ನು ಬಗೆಹರಿಸಲು, ಎರಡೂ ದೇಶಗಳು ಸೂಕ್ತ ಸಮಯದಲ್ಲಿ ಭೇಟಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೆ ನಾವು ಗಡಿ ಸಮಸ್ಯೆಯನ್ನು ದ್ವಿಪಕ್ಷೀಯ ಸಂಬಂಧ ಮೂಲಕ ಸರಿಯಾದ ಸ್ಥಳದಲ್ಲಿ ನಡೆಸಬೇಕು. ಎರಡೂ ದೇಶಗಳು ಪರಸ್ಪರ ಗೌರವಿಸಿ, ಪರಸ್ಪರ ನಂಬಿಕೆಯನ್ನು ಹೆಚ್ಚಿಸಿ, ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಮೂಲಕ ಸಾಮಾನ್ಯ ನೆಲೆಯನ್ನು ಹುಡುಕಬೇಕು ಎಂದು ಲೇಖನದಲ್ಲಿ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!