ಸಿಡ್ನಿ: ದ್ವೀಪ ರಾಷ್ಟ್ರಗಳಿಗೆ ಸುನಾಮಿ ಭೀತಿ!

ಸಿಡ್ನಿ: ದಕ್ಷಿಣ ಫೆಸಿಫಿಕ್‌ನಲ್ಲಿ ಭೀಕರ ಭೂಕಂಪ ಗುರುವಾರ ಸಂಭವಿಸಿದ ಹಿನ್ನೆಲೆ ಈ ಪ್ರದೇಶದ ದ್ವೀಪ ರಾಷ್ಟ್ರಗಳಿಗೆ ಸುನಾಮಿ ಭೀತಿ ಎದುರಾಗಿದೆ. ಗುರುವಾರ     ಮಧ್ಯರಾತ್ರಿ ವೇಳೆ (ಸ್ಥಳೀಯ ಕಾಲಮಾನದ ಪ್ರಕಾರ ಬುಧವಾರ ಮಧ್ಯಾಹ್ನ 1.20ಕ್ಕೆ)ನ್ಯೂ ಕಲೆಡೋನಿಯಾದಿಂದ 415 ಕಿಲೋಮೀಟರ್ ಪೂರ್ವದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ. ಇದರೊಂದಿಗೆ “ಅಪಾಯಕಾರಿ ಸುನಾಮಿ ಅಲೆಗಳು ಕಡಲ ತೀರವನ್ನು ಅಪ್ಪಳಿಸಲಿವೆ” ಎಂದು  ಅಮೆರಿಕ ಸರ್ಕಾರದ ಎನ್‌ಡಬ್ಲ್ಯುಎಸ್ ಪೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ಎಚ್ಚರಿಕೆಯನ್ನು ನೀಡಿದೆ.

ಫ್ಯುಜಿ, ನ್ಯೂಝಿಲೆಂಡ್ ಮತ್ತು ವನೂತು ಪ್ರದೇಶಗಳಲ್ಲಿ ಸಾಮಾನ್ಯ ತೆರೆ ಮಟ್ಟಕ್ಕಿಂತ 0.3 ಮೀಟರ್‌ನಿಂದ ಒಂದು ಮೀಟರ್ ಅಧಿಕ ಎತ್ತರದ ಅಲೆಗಳು ಅಪ್ಪಳಿಸಲಿವೆ ಎಂದು ಅಂದಾಜಿಸಲಾಗಿದೆ. ದ್ವೀಪರಾಷ್ಟ್ರ ಫ್ಯುಜಿಯ ಭೂಕಂಪ ಮಾಪನ ಇಲಾಖೆಯ ಟ್ವೀಟ್ ಪ್ರಕಾರ, ದೇಶಕ್ಕೆ 0.3 ಮೀಟರ್‌ಗಳ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ. ಸುನಾಮಿ ಸೃಷ್ಟಿಯಾಗಿರುವುದನ್ನು ದೃಢಪಡಿಸಿರುವ ಆಸ್ಟ್ರೇಲಿಯನ್ ಬ್ಯೂರೊ ಆಫ್ ಮೆಟ್ರಾಲಜಿ, ಆಸ್ಟ್ರೇಲಿಯಾದಿಂದ 550 ಕಿಲೋಮೀಟರ್ ಪೂರ್ವಕ್ಕೆ ಇರುವ ಲಾರ್ಡ್ ಹೋವ್ ದ್ವೀಪದ ಮೇಲೆ ಸುನಾಮಿ ಅಪ್ಪಳಿಸಲಿದೆ ಎಂದು ಎಚ್ಚರಿಕೆ ನೀಡಿದೆ.

ಅಲ್ಲದೆ ಮುಂಜಾಗೃತಾ ಕ್ರಮವಾಗಿ ನ್ಯೂಝಿಲೆಂಡ್‌ನ ರಾಷ್ಟ್ರೀಯ ತುರ್ತು ನಿರ್ವಹಣೆ ಏಜೆನ್ಸಿ ಕೂಡಾ, ಕಡಲ ತೀರದ ಜನ ಸುರಕ್ಷಿತ ತಾಣಗಳಿಗೆ ಹೋಗುವಂತೆ ಸಲಹೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!