ಪಿಕಪ್ ವಾಹನ ಪಲ್ಟಿ 12 ಮಂದಿ ಮೃತ್ಯು

ಭುವನೇಶ್ವರ: ಪಿಕಪ್ ವಾಹನವೊಂದು  ಪಲ್ಟಿಯಾಗಿ  12 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಒಡಿಶಾದ ಕೊರಪುತ್ ಜಿಲ್ಲೆಯ ಮುರ್ತಾಹಂಡಿಯಲ್ಲಿ ನಡದಿದೆ.

ವಾಹನದಲ್ಲಿದ್ದವರು ಚಂಡೀಗಢ ಮೂಲದವರಾಗಿದ್ದು ಇವರು, ಸಿಂಧಿಗುಡ ಗ್ರಾಮದ ಸಂಬಂಧಿಕರೊಬ್ಬರು ಮೃತರಾಗಿದ್ದ ಕಾರಣ ಅವರ ಅಂತ್ಯಸಂಸ್ಕಾರಕ್ಕಾಗಿ ಪಿಕಪ್ ವಾಹನದಲ್ಲಿ ಹೋಗಿದ್ದರು. ಅಂತ್ಯಸಂಸ್ಕಾರವನ್ನು ಮುಗಿಸಿ 35 ಮಂದಿ ವಾಪಸ್ ಮನೆಗೆ  ಬರುತ್ತಿದ್ದ ವೇಳೆ ಚಲಿಸುತ್ತಿದ್ದ ವಾಹನ ಪಲ್ಟಿಯಾಗಿದೆ. ವಾಹನದಲ್ಲಿ ಇದ್ದ 35 ಮಂದಿಗಳ ಪೈಕಿ 12ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭಿರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.ಘಟನೆ ಯಲ್ಲಿ ವಾಹನ ಚಾಲಕ ಅಪಾಯದಿಂದ ಪಾರಾಗಿದ್ದು,ವಾಹನ ಹೇಗೆ ಪಲ್ಟಿಯಾಯಿತ್ತು. ಅಪಘಾತಕ್ಕೆ ಕಾರಣವೇನು ಎಂದು ಪತ್ತೆಯಾಗಿಲ್ಲ.  ಪಿಕಪ್ ವಾಹನ ಛತ್ತೀಸ್‍ಘಡ ನೋಂದಣಿಯನ್ನು ಹೊಂದಿದ್ದು, ಸಾವನ್ನಪ್ಪಿದವರ ಗುರುತು ಪತ್ತೆಯಾಗಬೇಕಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!