ಮಂಗಳೂರು: ಕಾಣಿಕೆ ಹುಂಡಿಗೆ ಕಾಂಡಮ್‌ ಹಾಕಿದ ಕಿಡಿಗೇಡಿಗಳು

ಮಂಗಳೂರು : ಮಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ಧಾರ್ಮಿಕ ಅವಹೇಳನ,  ವಿಕೃತಿ ಮೆರೆದಿರುವ ಘಟನೆ ಗಳು ನಡೆಯುತ್ತಲೇ ಇದೆ. ಇತ್ತೀಗೆ ದೇವಸ್ಥಾನಕ್ಕೆ ನುಗ್ಗಿದ  ಕಿಡಿಗೇಡಿಗಳು ಕಳ್ಳತನ ನಡೆಸಿದ್ದು ಮಾತ್ರವಲ್ಲದೆ.  ದೇವಸ್ಥಾನದ ಒಳಗೆ ವಿಕೃತಿ ಮೆರೆದಿರುವ ಘಟನೆ ಬೆನ್ನಲ್ಲೇ ಮತ್ತೊಂದು ಇಂತಹದ್ದೇ ಘಟನೆ ನಡೆದಿದೆ. 

ಉಳ್ಳಾಲ ನಗರಸಭಾ ವ್ಯಾಪ್ತಿಯ ಪ್ಯಾರಿಸ್ ಜಂಕ್ಷನ್​ನಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ‌ ದುಷ್ಕರ್ಮಿಗಳು ಕಾಂಡೊಮ್ ಸಹಿತ ಚುಣಾವಣಾ ಪ್ರಚಾರದ ಪತ್ರಗಳು ಹಾಗೂ ಬಿಜೆಪಿ ಮುಖಂಡರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಅವರ ಭಾವಚಿತ್ರ ವಿರೂಪಗೊಳಿಸಿದಂತಹ ಕರಪತ್ರಗಳನ್ನು ಹಾಕಿರುವ ಹ್ಯೇಹ ಕೃತ್ಯ ನೇಡೆದಿದೆ.
ವಾರ್ಷಿಕ ಕೋಲೋತ್ಸವದ ಹಿನ್ನಲೆಯಲ್ಲಿ ಕಾಣಿಕೆ ಡಬ್ಬಿಯ ಬೀಗ ತೆಗೆದಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕೋಮು ಸೂಕ್ಷ್ಮ ಪ್ರದೇಶವಾದ ಉಳ್ಳಾಲದಲ್ಲಿ‌ ಇಂತಹ ಕೃತ್ಯ ನಡೆದಿದ್ದು ಸ್ಥಳೀಯರು  ಹಾಗೂ ಭಕ್ತರು ಆರೋಪಿಗಳನ್ನು ಪತ್ತೆ ಮಾಡುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!