22 ವರ್ಷಕ್ಕೆ 11 ಯುವತಿಯರನ್ನು ಪಟಾಯಿಸಿದ ಯುವಕ!

ಚೆನ್ನೈ: ದುಡ್ಡಿನ ಆಸೆಗಾಗಿ ಹತ್ತಾರು ಮದುವೆಗಳನ್ನು ಆಗುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ತನ್ನ ಕಾಮಚಟಕ್ಕಾಗಿ ಬರೋಬ್ಬರಿ 11 ಮದುವೆಯಾಗಿದ್ದು ಕೆಲಸದವಳ ಜೊತೆ ಸರಸ ಸಲ್ಲಾಪದ ವೇಳೆ ಕೊನೆಯ ಪತ್ನಿಗೆ ಸಿಕ್ಕಿಬಿದ್ದಿದ್ದಾನೆ. 

ಡಿಸೆಂಬರ್ 5ರಂದು ಚೆನ್ನೈನ ವಿಲ್ಲಿವಕ್ಕಮ್ ನಿವಾಸಿ ಗಣೇಶ್ ಎಂಬಾತ ಪ್ರೀತಿಸಿದ ಯುವತಿ ಜೊತೆ ಓಡಿ ಹೋಗಿ ಮದುವೆಯಾಗಿದ್ದನು. ಈ ಸಂಬಂಧ ಯುವತಿಯ ಪೋಷಕರು ಮಗಳು ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. 

ಇದನ್ನು ಅರಿತಿದ್ದ ಯುವಕ ಮೊದಲೇ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದನು. ಇನ್ನು ಯುವತಿ ಪೋಷಕರ ಜೊತೆ ಹೋಗಲು ನಿರಾಕರಿಸಿದ್ದರಿಂದ ಪೊಲೀಸರು ಆಕೆಯನ್ನು ಗಣೇಶ್ ಜೊತೆ ಕಳುಹಿಸಿದ್ದರು. 

ಆದರೆ ಗಣೇಶ್ ಕೆಲ ದಿನಗಳಲ್ಲೇ ತನ್ನ ಬುದ್ಧಿ ತೋರಿಸಿದ್ದಾನೆ. 17 ವರ್ಷದ ಯುವತಿಯನ್ನು ಮನೆ ಕೆಲಸಕ್ಕೆಂದು ಕರೆದುಕೊಂಡು ಬಂದಿದ್ದಾನೆ. ಅಲ್ಲದೆ ಆಕೆ ಜೊತೆ ಸಲುಗೆ ಬೆಳೆಸಿಕೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ 11ನೇ ಪತ್ನಿ ಗಣೇಶ್ ಜೊತೆ ಜಗಳವಾಡಿದ್ದಾಳೆ. ಈ ವೇಳೆ ರೂಂನಲ್ಲಿ ಕೂಡಿ ಹಾಕಿದ ಗಣೇಶ್ ಕಿರುಕುಳ ನೀಡಿದ್ದಾನೆ. 

ಇದರಿಂದ ಬೇಸರಗೊಂಡ ಯುವತಿ ಪೋಷಕರಿಗೆ ಕರೆ ಮಾಡಿ ತನ್ನನ್ನು ರಕ್ಷಿಸುವಂತೆ ಕೇಳಿದ್ದಾಳೆ. ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು ಈ ದೂರಿನ ಆಧಾರದ ಮೇಲೆ ಪೊಲೀಸರು ಗಣೇಶ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನು 11 ಮದುವೆಯಾಗಿರುವುದಾಗಿ ಹೇಳಿದ್ದಾನೆ. 

Leave a Reply

Your email address will not be published. Required fields are marked *

error: Content is protected !!