ಇಂಡೋನೇಷ್ಯಾ: ನಾಪತ್ತೆಯಾಗಿದ್ದ ವಿಮಾನ ಸಮುದ್ರದಲ್ಲಿ ಪತನ

ಜಕಾರ್ತಾ: ಟೇಕ್‌ಆಫ್ ಆದ ಕೂಡಲೇ ಸಂಪರ್ಕ ಕಳೆದುಕೊಂಡಿದ್ದ ಇಂಡೋನೇಷ್ಯಾದ ಶ್ರೀವಿಜಯ ಏರ್ ವಿಮಾನ ಸಮುದ್ರದಲ್ಲಿ ಪತನಗೊಂಡಿದೆ.

ದೇಶೀಯ ವಿಮಾನ ಬೋಯಿಂಗ್ 737-500  ಜಕಾರ್ತಾದಿಂದ ಮಧ್ಯಾಹ್ನ 1:56 ಕ್ಕೆ ಟೇಕ್ ಆಫ್ ಆಗಿತ್ತು ಮತ್ತು ಮಧ್ಯಾಹ್ನ 2:40 ಕ್ಕೆ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು. ವಿಮಾನ ಸುಮಾರು 10000 ಅಡಿ ಮೇಲೆ ಹಾರುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ರಡಾರ್‌ನೊಂದಿಗೆ ಸಂಪರ್ಕ ಕಡಿದುಕೊಂಡಿದೆ. 

ವಿಮಾನವು ಜಕಾರ್ತದಿಂದ ಪಶ್ಚಿಮ ಕಲಿಮಾಂಟನ್‌ನ ಪೊಂಟಿಯಾನನಕ್‌ನಲ್ಲಿ ಲ್ಯಾಂಡ್‌ ಆಗಬೇಕಿತ್ತು.

ಮಾನವ ದೇಹದ ಭಾಗಗಳು ಮತ್ತು ವಿಮಾನದ ಭಗ್ನಾವಶೇಷಗಳು ಪತ್ತೆಯಾಗಿವೆ ಎಂದು ತ್ರಿಶೂಲ ಕೋಸ್ಟ್ ಗಾರ್ಡ್ ಹಡಗಿನ ಕಮಾಂಡರ್ ಕ್ಯಾಪ್ಟನ್ ಇಕೊ ಸೂರ್ಯ ಹಾಡಿ ಹೇಳಿದ್ದಾರೆ. ಈ ವಿಮಾನದಲ್ಲಿ ಆರು ಮಕ್ಕಳು ಸೇರಿದಂತೆ 59 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!