ಉಡುಪಿ: “ಮಹಿಳಾ ಕಾಂಗ್ರೆಸ್ ನಡಿಗೆ, ಅನ್ನದಾತನ ಬಳಿಗೆ”
ಉಡುಪಿ: ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಹಾಗೂ ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ “ಮಹಿಳಾ ಕಾಂಗ್ರೆಸ್ ನಡಿಗೆ, ಅನ್ನದಾತನ ಬಳಿಗೆ” ಎಂಬ ವಿನೂತನ ಕಾರ್ಯಕ್ರಮವು ನಡೆಯಿತು. ಕೋಟ ಬ್ಲಾಕ್ ನ ಶೀರೂರು ಗ್ರಾಮದ ಶೀನ ನಾಯ್ಕ ಹಾಗೂ ಶಿವ ನಾಯ್ಕ ಅವರ ಹೊಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅವರು ಉಪಸ್ಥಿತರಿದರು.
ಕೇಂದ್ರ ಸರ್ಕಾರವು ಮೂರು ಕೃಷಿ ಮಸೂದೆಗಳನ್ನು ತರಲು ಹೊರಟಿದ್ದು,ಇದನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಸಾವಿರಾರು ರೈತರು ದೆಹಲಿ ಯಲ್ಲಿ ಹೋರಾಟಕ್ಕೆ ಇಳಿದಿದ್ದು, ಈ ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ರಾಜ್ಯಾದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಮಹಿಳಾ ಕಾಂಗ್ರೆಸ್ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ನಮ್ಮ ಹಸಿವನ್ನು ನೀಗಿಸಲು ಹಗಲು ರಾತ್ರಿ ಶ್ರಮಿಸುವ ರೈತರು ನಮಗೆಲ್ಲಾ ಅನ್ನದಾತರು”ಎಂದು ನುಡಿದರು.”ಅನ್ನದಾತನಿಗೆ ಶ್ರಮದಾನ ಮತ್ತು ಸನ್ಮಾನ” ಕಾರ್ಯಕ್ರಮದನ್ವಯ ಇಬ್ಬರೂ ರೈತರ ಹೊಲಗಳಿಗೆ ತೆರಳಿ ಅವರು ಬೆಳೆಸಿರುವ ತರಕಾರಿ ಬೆಳೆಗಳನ್ನು ಕೊಯ್ಯುವ ಮೂಲಕ ಶ್ರಮದಾನವನ್ನು ನಡೆಸಿದ ಮಹಿಳೆಯರು ಈ ಎರಡೂ ರೈತ ಕುಟುಂಬಗಳನ್ನು ಸೀರೆ,ಧೋತಿ,ಶಾಲು,ಫಲ ಪುಷ್ಪಗಳನ್ನು ನೀಡಿ ಸನ್ಮಾನಿಸಿದರು.
ತಾವು ಕೊಯ್ದ ತರಕಾರಿಗಳನ್ನು ತಾವೇ ಖರೀದಿಸುವ ಮೂಲಕ ರೈತರಿಗೆ ಬೆಂಬಲ ನೀಡಿದರು.ರೈತ ಕುಟುಂಬದೊಂದಿಗೆ ಸಹಭೋಜನವೂ ನಡೆಯಿತು.ಆರಂಭದಲ್ಲಿ ಅಗಲಿದ ರೈತರಿಗೆ ಶೃದ್ಧಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು. ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಯವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀಮತಿ ಕುಸುಮಾ ಕಾಮತ್ ಅವರು ಸ್ವಯಂ ರಚಿಸಿ ಹಾಡಿದ ಎರಡು ರೈತಗೀತೆ ಗಳು ಎಲ್ಲರ ಮೆಚ್ಚುಗೆ ಗಳಿಸಿದವು. ಇದೇ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿಯ ಕೆಲವು ನೂತನ ಪದಾಧಿಕಾರಿಗಳಿಗೆ ಡಾ.ಪುಷ್ಪಾ ಅಮರನಾಥ್ ಅವರು ಆದೇಶ ಪತ್ರವನ್ನು ನೀಡಿ ಅಭಿನಂದಿಸಿದರು.
ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ಅವರು ಧನ್ಯವಾದ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೋಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಉಪಾಧ್ಯಕ್ಷರಾದ ಕಿಶೋರ್ ಶೆಟ್ಟಿ, ವೈ.ಬಿ.ರಾಘವೇಂದ್ರ,ಸುರೇಶ್, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಉಸ್ತುವಾರಿ ಸುರೇಖಾ ಚಂದ್ರಹಾಸ, ಮಂಗಳೂರಿನ ಮಾಜಿ ಕಾರ್ಪೋರೇಟರ್ ಅಪ್ಪಿ, ವೆರೋನಿಕಾ ಕರ್ನೇಲಿಯೋ, ಡಾ.ಸುನೀತಾ ಶೆಟ್ಟಿ, ರೋಶನಿ ಒಲಿವರ್, ಮೀನಾಕ್ಷಿ ಮಾಧವ ಬನ್ನಂಜೆ, ಸರಸು.ಡಿ.ಬಂಗೇರಾ,ಶಾಂತಿ ಪಿರೇರಾ,ಜ್ಯೋತಿ ಹೆಬ್ಬಾರ್,ಪ್ರಭಾವತಿ ಸಾಲಿಯಾನ್,ಆಗ್ನೇಸ್ ಡೇಸಾ,ಪ್ರೆಸಿಲ್ಲಾ ಡಿ’ಮೆಲ್ಲೋ,ಬ್ಲಾಕ್ ಅಧ್ಯಕ್ಷರಾದ ಪ್ರಭಾ ಶೆಟ್ಟಿ,ಸಂಧ್ಯಾ ಶೆಟ್ಟಿ,ಗೋಪಿ.ಕೆ.ನಾಯ್ಕ್, ಜೇಬಾ ಸೆಲ್ವನ್, ಜಯಶ್ರೀ ಶೇಟ್, ಹಿರಿಯರಾದ ರಾಜೀವ್ ಶೆಟ್ಟಿ, ದಿನೇಶ್ ಬಂಗೇರಾ,ಪ್ರಸನ್ನ,ಬಾಬು ನಾಯ್ಕ, ಕೃಷ್ಣಯ್ಯಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ಯಾವುದೇ ಪಕ್ಷದ ಕಾರ್ಯಕರ್ತರು ರೈತನ ಬಗ್ಗೆ ಈಗ ತೋರಿಸುವ ಕಾಳಜಿಯನ್ನು ಆತನ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಮುಂತಾದ ವ್ಯವಸ್ಥೆಯನ್ನು ಮಾಡುವುದನ್ನು ಬಿಟ್ಟು ಈ ರೀತಿಯ ಬೂಟಾಟಿಕೆಯ ಪ್ರದರ್ಶನಕ್ಕೆ ಸಾರ್ವಜನಿಕರು ಮರುಳಾಗಬಾರದು. ಮೊದಲು ಈ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ರೈತರ ಬಗ್ಗೆ ಕಾಳಜಿಇಲ್ಲದಿರುವುದನ್ನು ಈ ಹಿಂದಿನ ತಮ್ಮ ಆಳ್ವಿಕೆಯ ಕಾಲದಲ್ಲಿ ತೋರಿಸಿಕೊಟ್ಟಿರುವುದನ್ನು ಜನಸಾಮಾನ್ಯರು ಇನ್ನೂ ಮರೆತಿಲ್ಲ!!