ಕಡಿಯಾಳಿಯಲ್ಲಿ ‘ಗೋ ಗ್ರೀನ್ – ಸಾವಯವ’ ಮಳಿಗೆ ಶುಭಾರಂಭ

ಉಡುಪಿ: (ಉಡುಪಿ ಟೈಮ್ಸ್ ವರದಿ) ನಗರದ ಹೆಸರಾಂತ “ಗೋ ಗ್ರೀನ್-ಸಾವಯವ ” ಮಳಿಗೆಯ ದ್ವಿತೀಯ ಶಾಖೆ ಇಂದು ಕಡಿಯಾಳಿ ಮುಖ್ಯ ರಸ್ತೆಯ ಸಚ್ವಿದಾನಂದ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತು.

ಗೋ ಗ್ರೀನ್ ಸಾವಯವದ ನೂತನ ಶಾಖೆಯನ್ನು ಮಂಗಳೂರಿನ ಮಂಗಳಾದೇವಿ ಚರ್ಚ್ ನ ಧರ್ಮ ಗುರು ಫಾದರ್ ವಿಜಯ್ ಉದ್ಘಾಟಿಸಿದರು.

ಈ ಸಂದರ್ಭ ಸಮಾರಂಭದಲ್ಲಿ ಸಂಸ್ಥೆಯ ಮಾಲಕ ಫೆಲಿಕ್ಸ್ ಆಳ್ವ, ಸಂತೋಷ್ ಫೆರ್ನಾಂಡೀಸ್, ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಸುಧಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಉಡುಪಿಯ ಮದರ್ ಆಫ್ ಸಾರೋ ಚರ್ಚ್‌ನ ವಿದ್ಯಾ ಜ್ಯೋತಿ ಕಟ್ಟಡದಲ್ಲಿರುವ ‘ಗೋ ಗ್ರೀನ್’ ನ ಮೊದಲ ಶಾಖೆ, ಹಲವಾರು ವರ್ಷಗಳಿಂದ ಕೃಷಿಗೆ ಸಂಬಂಧಿಸಿದ ಪರಿಕರಗಳು, ಮನೆಯ ಗಾರ್ಡ್‌ನ್‌ನ ಅಂದ ಹೆಚ್ಚಿಸುವ ಗಿಡಗಳನ್ನು  ಮಾರಾಟ ಮಾಡುತ್ತ, ನಗರದಲ್ಲಿ ಪ್ರಸಿದ್ದಿ ಪಡೆದುಕೊಂಡಿದೆ.

ಗೋ ಗ್ರೀನ್‌ನಲ್ಲಿ ಸಾವಯವ ಮಳಿಗೆಯಲ್ಲಿ ಗ್ರೋ ಬ್ಯಾಗ್ಸ್, ಫ್ಲವರ್ ಪಾಟ್ಸ್, ಕೋಕೊ ಪೀಟ್ಸ್, ಸೀಡ್ಸ್, ಪಾಟ್ ಮಿಕ್ಸ್, ವರ್ಮಿ ಕಂಪೋಸ್ಟ್, ಇಂಡೋರ್ ಆಂಡ್ ಔಟ್ ಡೋರ್ ಪ್ಲಾಂಟ್ಸ್, ಸ್ಪ್ರೇಯರ್ಸ್, ನೀಮ್ ಆಯಿಲ್, ನೀಮ್ ಕೇಕ್ , ಟೆರೆಸ್ ಗಾರ್ಡನ್, ಹೈಡ್ರೋಪೋನಿಕ್, ಗಾರ್ಡನ್ ಮೈಂಟೆನೆನ್ಸ್, ಹೌಸ್ ಗಾರ್ಡನಿಂಗ್ ಮಾತ್ರವಲ್ಲದೆ ಕೃಷಿಗೆ ಸಂಬಂಧಿಸಿದ ಸಾವಯ ಗೊಬ್ಬರ, ರೈತರಿಗೆ ಬೇಕಾದ ಕೃಷಿ ಸಂಬಂಧಿಸಿದ ಸಲಕರಣೆಗಳು ಅತೀ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ.

Leave a Reply

Your email address will not be published. Required fields are marked *

error: Content is protected !!