ವಿಶ್ವ ಏಡ್ಸ್ ದಿನ – 2020 ರ ಆಚರಣೆ ಪ್ರಯುಕ್ತ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ

ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರೆಡ್‌ಕ್ರಾಸ್ ಮತ್ತು ಎನ್.ಎಸ್.ಎಸ್. ಘಟಕ, ಉದ್ಯಾವರ, ಇವರು ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಮತ್ತು ನಾಗರಿಕ ಸಹಾಯವಾಣಿ ಕೇಂದ್ರ, ಉಡುಪಿ ಉದ್ಭವ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬೆಂಗಳೂರು, ಜಿಲ್ಲಾ ಆಸ್ಪತ್ರೆ, ಉಡುಪಿ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನ – 2020 ರ ಆಚರಣೆ ಪ್ರಯುಕ್ತ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವು ಉಡುಪಿಯ  ಸರ್ವೀಸ್ ಬಸ್ ನಿಲ್ದಾಣ ಬಳಿ ನಡೆಸಲಾಯಿತು. 

ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ  ಅವರು ಜಾಥವನ್ನು ಉದ್ಘಾಟಿಸಿದರು.    ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಪ್ರಾರಂಭಗೊಂಡ ಈ ಜನ ಜಾಗೃತಿ ಜಾಥವು  ಕೆ.ಎಮ್. ಮಾರ್ಗದ ಮೂಲಕ ಟೌನ್ ಹಾಲ್‌ನಲ್ಲಿ ಕೊನೆಗೊಂಡಿತು. ಜಾಥದಲ್ಲಿ, ಯುವ ರೆಡ್‌ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇದರ ಸುಮಾರು 65 ಉತ್ಸಾಹಿ ಸದಸ್ಯರು ಏಡ್ಸ್ ಬಗ್ಗೆ ಫಲಕಗಳನ್ನು ಪ್ರದರ್ಶಿಸುತ್ತ ಜನರಲ್ಲಿ ಜಾಗೃತಿ ಮೂಡಿಸುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದರು. 

ಬಳಿಕ ಟೌನ್ ಹಾಲ್ ನಲ್ಲಿ ನಡೆದ ಜಾಥಾದ ಸಭಾ ಕಾರ್ಯಕ್ರಮ ವನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಉದ್ಘಾಟಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವಹಿಸಿದ್ದರು.
  
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ದಲ್ಲಿ ಎಸ್.ಡಿ.ಎಮ್ ಮಹಾವಿದ್ಯಾಲಯದ ಕೆಂಪು ರಿಬ್ಬನ್ ಕ್ಲಬ್‌ನ ವತಿಯಿಂದ 2019-20ರ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಯುನಿಟ್‌ಗಳ ರಕ್ತ ಸಂಗ್ರಹಣೆ ಮಾಡಿದ ಸಾಧನೆಯನ್ನು ಗುರುತಿಸಿ  ಯುವ ರೆಡ್‌ಕ್ರಾಸ್ ಸಂಚಾಲಕರಾಗಿರುವ ಡಾ. ಮೊಹಮ್ಮದ್ ಫೈಸಲ್‌ರವರನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಜಿಲ್ಲಾಧಿಕಾರಿಯವರು ಗೌರವಿಸಿದರು.ಈ ಸಂದರ್ಭ  ಯುವ ರೆಡ್‌ಕ್ರಾಸ್‌ನ್ ಅಧಿಕಾರಿಗಳಾದ ಡಾ. ಮೊಹಮ್ಮದ್ ಫೈಸಲ್ ಮತ್ತು ಸದಸ್ಯರಾದ ಡಾ. ತೇಜಸ್ವಿ ನಾಯ್ಕ್, ಡಾ. ಸುಶ್ಮಿತಾ ವಿ.ಎಸ್, ಎನ್.ಎಸ್.ಎಸ್. ಅಧಿಕಾರಿ ಡಾ. ವಿದ್ಯಾಲಕ್ಷ್ಮೀ ಕೆ., ಸದಸ್ಯರಾದ ಡಾ. ಶ್ರೀನಿಧಿ ಧನ್ಯ, ಡಾ. ಸಂದೇಶ್ ಕುಮಾರ್  ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!