ನ.14(ನಾಳೆ) ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌ.ಕೋ-ಆ.ಸೊಸೈಟಿಯ 3ನೇ ಶಾಖೆ ಪೆರಂಪಳ್ಳಿಯಲ್ಲಿ ಉದ್ಘಾಟನೆ
ಉಡುಪಿ, ನ. 13: ನಗರದ ಎಂ.ಜಿ.ಎಂ. ಕಾಲೇಜಿನ ಎದುರು ಪ್ರಧಾನ ಕಚೇರಿ ಹೊಂದಿರುವ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 3ನೇ ಶಾಖೆ ಮೂಡುಪೆರಂಪಳ್ಳಿಯ ಅಕ್ಕಯ್ಯ ಟವರ್‌ನ ನೆಲ ಮಹಡಿಯಲ್ಲಿ ನ. 14ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟನೆ ನೆರವೇರಿಸಲಿದ್ದಾರೆ.
ಪೆರಂಪಳ್ಳಿ ಟ್ರಿನಿಟಿ ಸೆಂಟ್ರಲ್ ಸ್ಕೂ ಪ್ರಾಂಶುಪಾಲ ರೆ| ಫಾ| ಡೊಮಿನಿಕ್ ಸುನಿಲ್ ಲೋಬೋ ಆಶೀರ್ವಚನ ನೀಡಲಿದ್ದಾರೆ.
ತೊಟ್ಟಂ ಸೈಂಟ್ ಆ್ಯನ್ಸ್ ಚರ್ಚ್‌ನ ಧರ್ಮಗುರು ರೆ| ಫಾ| ಹೆನ್ರಿ ಮಸ್ಕರೆನ್ಹಾಸ್, ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ರೆ| ಫಾ| ಜೋಸೆಫ್ ಮಚಡೋ, ಮಾಜಿ ಶಾಸಕ ರಘುಪತಿ ಭಟ್, ಮಣಿಪಾಲ ಎಚ್‌ಪಿಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರಿಪ್ರಸಾದ್ ರೈ, ದಾಯ್ಜಿವಲ್ಡ್ರ್ ಮೀಡಿಯಾ ನೆಟ್‌ರ್ವಕ್ ನ ಸ್ಥಾಪಕ ವಾಲ್ಟರ್ ನಂದಳಿಕೆ, ಫೆರ್ನಾಂಡಿಸ್ ಗ್ರೂಪ್ ಅಧ್ಯಕ್ಷ ವಿಲ್ಸನ್ ಫೆರ್ನಾಂಡಿಸ್, ಪೆರಂಪಳ್ಳಿ ಕ್ರಿಶ್ಚಿಯನ್ ಯೂನಿಟಿ ಅಧ್ಯಕ್ಷ ವಿನ್ಸೆಂಟ್ ಡಿ’ಸೋಜಾ, ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌ ಕಂ. ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಧ್ಯಕ್ಷೆ ಜೆಸಿಂತಾ ಡಿ’ಸೋಜಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೀವನ್ ಡಿಸೋಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





