ಕಟಪಾಡಿಯಲ್ಲಿ ನ.15ರಂದು ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರ

ಉಡುಪಿ: ಮಹಿಳೆಯರ ಆರೋಗ್ಯದ ಕಾಳಜಿಯಿಂದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ನವೆಂಬರ್ 15ರಂದು ಕಟಪಾಡಿಯಲ್ಲಿ ಆಯೋಜಿಸಲಾಗಿದೆ.

ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ, ಉಡುಪಿ, ಎಸ್.ವಿ.ಎಸ್. ವಿದ್ಯಾವರ್ಧಕ ಸಂಘ, ಕಟಪಾಡಿ, ರೋಟರಿ ಕ್ಲಬ್, ಕಟಪಾಡಿ ಹಾಗೂ ಮಹಿಳಾ ಸಮಾಜ ವೆಂಕಟರಮಣ ದೇವಸ್ಥಾನ, ಕಟಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ನಡೆಯಲಿದೆ.

ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಟಪಾಡಿಯ ಲೋಂಬಾರ್ಡ್ ಮಿಷನ್ ಆಸ್ಪತ್ರೆಯ ಹೆಲ್ತ್ ಸೆಂಟರ್‌ನಲ್ಲಿ ಶಿಬಿರ ನಡೆಯಲಿದ್ದು, ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ಸಂಬಂಧಿತ ತಜ್ಞರ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಶಿಬಿರದಲ್ಲಿ ಡಾ. ದೀಪಾ ವಿ. ರಾವ್, ಡಾ. ಅಕ್ಷತ ಎಸ್. ರಾವ್ ಹಾಗೂ ಡಾ. ಅಕ್ಕಮಹಾದೇವಿ ಅವರು ತಪಾಸಣೆ ಮತ್ತು ಸಲಹೆ ನೀಡಲಿದ್ದಾರೆ.

ಮಹಿಳೆಯರು ಈ ಉಚಿತ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ದಿನಾಂಕ: ನ‌‌. 15, 2026, ಭಾನುವಾರ
ಸಮಯ: ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ
ಸ್ಥಳ: ಲೋಂಬಾರ್ಡ್ ಮಿಷನ್ ಆಸ್ಪತ್ರೆ ಹೆಲ್ತ್ ಸೆಂಟರ್, ಕಟಪಾಡಿ. ಸಂಪರ್ಕ:
92424 64674 / 81474 80585

Leave a Reply

Your email address will not be published. Required fields are marked *

error: Content is protected !!