ಪಟಾಕಿ ಹಚ್ಚುವ ಬದಲು ಆಶ್ರಮದ ಮಕ್ಕಳಿಗೆ ಬಟ್ಟೆ ವಿತರಿಸಿ ಮಾನವೀಯತೆ ಮೆರೆದ ಸಂಸ್ಥೆ
ಉಡುಪಿ: ಜಿಲ್ಲಾ ರಾಜ್ಯೋತ್ಸವ ಸನ್ಮಾನ ಪಡೆದಂತಹ ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ಉದ್ಯಾವರ 14ನೇ ವರ್ಷದ ದೀಪಾವಳಿ ಸಂಭ್ರಮಾಚಾರಣೆ ಶ್ರೀ ಕೃಷ್ಣ ಬಾಲನಿಕೇತನ ಕುಕ್ಕಿಕಟ್ಟೆಯಲ್ಲಿ ನಡೆಯಿತು.
ಇಲ್ಲಿಯ ಮಕ್ಕಳಿಗೆ ಸತತ 14ನೇ ಬಾರಿಗೆ 50 ಸಾವಿರಕ್ಕೂ ಮಿಕ್ಕಿ ಮೊತ್ತದ ಹೊಸ ಬಟ್ಟೆಗಳನ್ನು ನೀಡುವುದರೊಂದಿಗೆ ಈ ವರ್ಷದ ದೀಪವಳಿಯನ್ನು ಕುಕ್ಕಿಕಟ್ಟೆ ಶ್ರೀ ಕೃಷ್ಣ ಬಾಲನಿಕೇತನ ದಲ್ಲಿ ಸದಸ್ಯರೆಲ್ಲರೂ ಸೇರಿಕೊಂಡು ಆಚರಿಸಲಾಯಿತು.
ತಂಡದ ಸದಸ್ಯರು ಮನೆಯಲ್ಲಿ ಆಚರಿಸುವ ಸುಡು ಮದ್ದಿನ ಖರ್ಚನ್ನು ಸ್ವಲ್ಪ ತೆಗೆದಿಟ್ಟು ಈ ರೀತಿ ವಿಶೇಷ ಆಚರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ.





