ಉಡುಪಿ ಸಿಂಡಿಕೇಟ್ ಸೌ. ಕೋ-ಆ.ಸೊಸೈಟಿ: 25 ಅಗತ್ಯ ಕುಟುಂಬಗಳಿಗೆ ಅಕ್ಕಿ ವಿತರಣೆ
ಶಿರ್ವ: ಉಡುಪಿಯಲ್ಲಿ ಕಾರ್ಯಚರಿಸುತ್ತಿರುವ ಉಡುಪಿ ಸಿಂಡಿಕೇಟ್ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ದ್ವಿತೀಯ ಶಾಖೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ, ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸೇವಾ ಚಟುವಟಿಕೆಯ ಭಾಗವಾಗಿ ಸದಾ ಕಷ್ಟದಲ್ಲಿರುವ ಮತ್ತು ಅಗತ್ಯ ಕುಟುಂಬಗಳಿಗೆ ಸ್ಪಂದಿಸುತ್ತಿರುವ ಶಿರ್ವ ವಲಯದ ಸಂತ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಮೂಲಕ 25 ಅಗತ್ಯ ಕುಟುಂಬಗಳಿಗೆ ಅಕ್ಕಿ ವಿತರಣೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಶಿರ್ವ ವಲಯದ ಅಧ್ಯಕ್ಷ ಡೇವಿಡ್ ಮತಾಯಸ್, ಪ್ರಮುಖರಾದ ಜೂಲಿಯನ್ ರೊಡ್ರಿಗಸ್, ನೋರ್ಬರ್ಟ್ ಮಚಾದೊ, ಮೋಹನ್ ನೊರೋನ್ನ ಸಾಂಕೇತಿಕವಾಗಿ ಅಗತ್ಯ ಕುಟುಂಬಗಳ ಪರವಾಗಿ ಅಕ್ಕಿಯನ್ನು ಸ್ವೀಕರಿಸಿದರು ಸ್ವೀಕರಿಸಿದರು.
ದ್ವಿತೀಯ ಶಾಖೆಯ ಆಶೀರ್ವಚನವನ್ನು ಸ್ಥಳೀಯ ಆರೋಗ್ಯ ಮಾತ ದೇವಾಲಯದ ಪ್ರಧಾನ ಧರ್ಮ ಗುರು ವಂದನೀಯ ಫಾ. ಚಾರ್ಲ್ಸ್ ಮಿನೇಜಸ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋ-ಆಪರೇಟಿವ್, ಬೆಂಗಳೂರು ಇದರ ನಿರ್ದೇಶಕ ಮಂಜುನಾಥ್ ಎಸ್.ಕೆ., ಕೇರಳದ ಪೊಟ್ಟ ಡಿವೈನ್ ರಿಟ್ರೇಟ್ ಸೆಂಟರ್‌ನ ಧರ್ಮಗುರು ಫಾ. ರಿಚರ್ಡ್ ಕ್ವಾಡ್ರಸ್, ಉಡುಪಿ ಜಿಲ್ಲಾ ಸೌಹಾರ್ದ ಕೋ-ಆಪರೇಟಿವ್ ಯೂನಿಯನ್ ಅಧ್ಯಕ್ಷ ಪಿ. ಜಗನ್ನಾಥ ಶೆಟ್ಟಿ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಮೆಲ್ವಿನ್ ಅರಾನ್ನ, ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್‌ನ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್. ಹಾಗೂ ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೊಸೈಟಿಯ ಉಪಾಧ್ಯಕ್ಷ ಅಜಯ್ ಕುಮಾರ್ ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.
ಸೊಸೈಟಿಯ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶಾಖಾ ವ್ಯವಸ್ಥಾಪಕಿ ಫೆಲ್ಸಿ ಡಿಸೋಜಾ ವOದಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.





