ಪಾದ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ಪೋಷಕರಿಂದ ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ದೂರು

ಮಂಗಳೂರು: ನಗರದ ಚರ್ಚ್ ವೊಂದರ ಧರ್ಮಗುರು ವಿರುದ್ಧ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಂತ್ರಸ್ತ ಮಕ್ಕಳು ಮತ್ತು ಅವರ ಪೋಷಕರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ. ದೂರಿಗೆ ಸಂಬಂಧಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನಿರ್ದೇಶನಾಲಯವು ಸೂಚನೆ ನೀಡಿದೆ.

‘ನಗರದ ಚರ್ಚ್ ವೊಂದರ ಧರ್ಮಗುರು ಗಂಡು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪವಿದೆ. ಆದರೆ ದೂರಿನಲ್ಲಿ ಸಂತ್ರಸ್ತರು ಯಾರು ಎಂಬುದರ ಕುರಿತು ಉಲ್ಲೇಖವಿಲ್ಲ. ನಾವು ಈ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದೇವೆ’ ಎಂದು ಜಿಲ್ಲೆಯ ಮಕ್ಕಳ ರಕ್ಷಣಾ ಘಟಕದ ಮೂಲಗಳು ತಿಳಿಸಿವೆ.

ಲೈಂಗಿಕ ಶೋಷಣೆಯ ಬಗ್ಗೆ ಸಂತ್ರಸ್ತ ಮಕ್ಕಳು ಹಾಗೂ ಅವರ ಪೋಷಕರು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ರಿಗೂ ಪತ್ರ ಬರೆದಿದ್ದರು ಎಂದು ಹೇಳಲಾಗುತ್ತಿದೆ.

ಮಂಗಳೂರು ಧರ್ಮಪ್ರಾಂತಕ್ಕೆ ಸೇರಿದ ಪಾದ್ರಿಯೊಬ್ಬರು 50ಕ್ಕೂ ಹೆಚ್ಚು ಬಾಲಕರ ಮೇಲೆ ಲೈಂಗಿಕ ಶೋಷಣೆ ಎಸಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಷಪರಿಗೂ ದೂರು ಸಲ್ಲಿಕೆಯಾಗಿತ್ತು. ಆದರೆ ಸೂಕ್ತ ಸ್ಪಂದನ ಸಿಗದಿದ್ದಾಗ ಸಂತ್ರಸ್ತರು ಮಕ್ಕಳ ಹಕ್ಕುಗಳ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!