CEC ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ಅ. 2ರಿಂದ ದೇಶವ್ಯಾಪಿ ಪ್ರತಿಭಟನೆ: CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಘೋಷಣೆ
ಹೊಸದಿಲ್ಲಿ: ಶನಿವಾರದೊಳಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದಿದ್ದರೆ, ಅಕ್ಟೋಬರ್ 2ರಿಂದ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸಂಚಾಲಕ ಅಭಿಜೀತ್ ದೀಪ್ಕೆ ಘೋಷಿಸಿದ್ದಾರೆ.
“ಒಂದು ವೇಳೆ ನಾಳೆಯೊಳಗೆ ಜ್ಞಾನೇಶ್ ಕುಮಾರ್ ಏನಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದಿದ್ದರೆ, ಕಾಕ್ರೋಚ್ ಜನತಾ ಪಾರ್ಟಿ ಅಕ್ಟೋಬರ್ 2ರಂದು ಮುಂಬೈನಿಂದ ದೇಶವ್ಯಾಪಿ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಯನ್ನು ಭಾರತದಾದ್ಯಂತ ಇರುವ ನಗರಗಳಿಗೆ ವಿಸ್ತರಿಸಲಾಗುವುದು” ಎಂದು ಅವರು ಹೇಳಿದರು.
ಈ ಪ್ರತಿಭಟನೆ ಗಾಂಧಿ ಜಯಂತಿಯಂದು ಮುಂಬೈನಲ್ಲಿ ಪ್ರಾರಂಭಗೊಳ್ಳಲಿದ್ದು, ಅದನ್ನು ದೇಶಾದ್ಯಂತ ಇರುವ ನಗರಗಳಿಗೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
“ಗಾಂಧಿ ಜಯಂತಿಯಂದು ಪ್ರಜಾಪ್ರಭುತ್ವವನ್ನು ರಕ್ಷಿಸುವ ಪಣವನ್ನು ತೊಡೋಣ” ಎಂದೂ ಅವರು ಕರೆ ನೀಡಿದರು.
“ನಮ್ಮ ಗಣರಾಜ್ಯವನ್ನು ಮರುವಶಪಡಿಸಿಕೊಳ್ಳುಲು ಅಕ್ಟೋಬರ್ 2ಕ್ಕಿಂತ ಮತ್ತೊಂದು ಒಳ್ಳೆಯ ದಿನವಿಲ್ಲ” ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸಹ ಸಂಚಾಲಕ ಅಶುತೋಷ್ ರಂಕಾ ಇದೇ ವೇಳೆ ಅಭಿಪ್ರಾಯಪಟ್ಟರು.





