ಉಡುಪಿ: ನಿಲ್ಲಿಸಿದ್ದ ಬಸ್ ಮತ್ತು ಟೆಂಪೊಗೆ ಬೆಂಕಿ ತಗುಲಿ ಅಪಾರ ನಷ್ಟ
ಉಡುಪಿ: ನಗರದ ಹೊರವಲಯದ ದೆಂದೂರುಕಟ್ಟೆಯ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್ ಮತ್ತು ಟೆಂಪೊಗೆ ಬೆಂಕಿ ತಗುಲಿ ಸುಟ್ಟು ಘಟನೆ ತಡರಾತ್ರಿ ನಡೆದಿದೆ.
ಘಟನೆಯಿಂದ ಬಸ್ಸಿನ ಬಳಿಯೇ ನಿಲ್ಲಿಸಿದ್ದ ಟೆಂಪೊವೊಂದಕ್ಕೂ ಬೆಂಕಿ ಹರಡಿಕೊಂಡಿದೆ. ಸೆಕ್ಯೂರಿಟಿ ಗಾರ್ಡ್ ಹಾಗೂ ಇತರರು ಸೇರಿ ನಂದಿಸಿದರೆನ್ನಲಾಗಿದೆ. ಅದೆ ಪೆಟ್ರೋಲ್ ಪಂಪಿನಲ್ಲಿ ಇನ್ನೊಂದು ಬಸ್ಸನ್ನೂ ಪಾರ್ಕ್ ಮಾಡಲಾಗಿತ್ತಾದರೂ ಯಾವುದೇ ಅಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಪೆಟ್ರೋಲ್ ಪಂಪಿಗೂ ಬೆಂಕಿ ಹರಡದೆ ದೊಡ್ಡ ಅವಘಡವಾಗುವುವುದು ತಪ್ಪಿದಂತಾಗಿದೆ. ಸರ್ವಿಸ್ ಬಸ್ ಭಾಗೀರಥ ಉಡುಪಿಯಿಂದ ಕಾರ್ಕಳ ಸಂಚಾರ ಸೇವೆ ನೀಡುತ್ತಿತ್ತು.
ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.





