ಆದರ್ಶ ಆಸ್ಪತ್ರೆ ಉಡುಪಿ: ಸೆ.27ರಂದು ಉಚಿತ ಹೃದ್ರೋಗ ತಪಾಸಣೆ
ಉಡುಪಿ: ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಆರಂಭಿಕ ಹಂತದಲ್ಲೇ ಹೃದಯದ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಆದರ್ಶ ಆಸ್ಪತ್ರೆ, ಉಡುಪಿ ವತಿಯಿಂದ ಸೆಪ್ಟೆಂಬರ್ 27ರಂದು ಉಚಿತ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಸೆಪ್ಟೆಂಬರ್ 27ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ಆದರ್ಶ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದೆ. ಹೃದಯ ತಜ್ಞರಾದ ಡಾ.ಶ್ರೀಕಾಂತ್ ಕಿಣಿ, ಡಾ. ಸುಹಾಸ್ ಜಿ.ಸಿ., ಡಾ.ವಿಶು ಕುಮಾರ್ ಬಿ. ಹಾಗೂ ಡಾ. ಗುರುಪ್ರಸಾದ್ ಡಿ. ರೈ ಅವರ ನೇತೃತ್ವದಲ್ಲಿ ತಪಾಸಣೆ ನಡೆಯಲಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿವಿಧ ತಪಾಸಣೆಗಳು ಉಚಿತ
ಶಿಬಿರದಲ್ಲಿ ರಕ್ತದ ಸಕ್ಕರೆ ಪರೀಕ್ಷೆ (RBS), ಇಸಿಜಿ (ECG), ಹೃದಯದ ಸ್ಕ್ಯಾನಿಂಗ್ (Echo), ಟಿ.ಎಂ.ಟಿ. (TMT) ಹಾಗೂ ರಕ್ತದ ಕೊಲೆಸ್ಟ್ರಾಲ್ ಪರೀಕ್ಷೆ (LIPID Profile) ಸೇರಿದಂತೆ ವಿವಿಧ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ.
ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಈ ಶಿಬಿರದ ಪ್ರಯೋಜನ ಪಡೆದವರಿಗೆ ಆಂಜಿಯೋಗ್ರಾಮ್ ಪರೀಕ್ಷೆ, ಹೃದಯದ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಹಾಗೂ CABG ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ರಿಯಾಯಿತಿ ಸೌಲಭ್ಯವನ್ನು ನೀಡಲಾಗುವುದು ಎಂದು ಆಸ್ಪತ್ರೆ ತಿಳಿಸಿದೆ.
ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು, ಹೃದಯ ಸಂಬಂಧಿ ಲಕ್ಷಣಗಳಿರುವವರು ಹಾಗೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಬಯಸುವವರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆ ಮನವಿ ಮಾಡಿದೆ.





