ಮೊಬೈಲ್ ಗೇಮ್‌ನ ಗೀಳು- ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ

ಬ್ರಹ್ಮಾವರ, ಸೆ.11: ಪೊಲೀಸ್ ಸಿಬ್ಬಂದಿಯ ಪುತ್ರನೋರ್ವ ಮಂಚದ ಕಾಲನ್ನು ಕುತ್ತಿಗೆಗೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.9 ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ನಡೂರು ಗ್ರಾಮದ ನಿಕ್ಷೇಪ(17) ಎಂದು ಗುರುತಿಸಲಾಗಿದೆ. ಪಿಯುಸಿ ವಿದ್ಯಾರ್ಥಿಯಾಗಿದ್ದ ನಿಕ್ಷೇಪ, ಓದಲು ರೂಮಿಗೆ ಹೋಗಿದ್ದು, ರಾತ್ರಿಯಾದರೂ ಬಾಗಿಲು ತೆಗೆಯದೇ ಇದ್ದಾಗ, ಮನೆಯವರು ಬಾಗಿಲು ಒಡೆದು ಒಳಗೆ ಹೋದರು. ಅಲ್ಲಿ ನೋಡಿದಾಗ ನಿಕ್ಷೇಪ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿದ್ದು, ಆತನ ಕುತ್ತಿಗೆಯ ಮೇಲೆ ಮಂಚದ ಒಂದು ಬದಿಯ ಕಾಲು ಇರುವುದು ಕಂಡುಬಂದಿದೆ. ಆತನನ್ನು ಕೂಡಲೆ ಬ್ರಹ್ಮಾವರ ಖಾಸಗಿ ಆಸ್ಪತೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ನಿಕ್ಷೇಪ ಮೃತಪಟ್ಟಿರುವುದಾಗಿ ತಿಳಿಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ ನಿಕ್ಷೇಪನು ಮೊಬೈಲ್ ಗೇಮ್ ಆಡುತ್ತಿದ್ದ, ಯಾವುದೋ ಆ್ಯಪ್ ಬಳಸಿ ಗೇಮ್‌ನ ಗೀಳಿಗೆ ಬಿದ್ದಿದ್ದ ಇದರಿಂದಲೇ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!