ಪಿತ್ರೋಡಿ: ದೇವಕಿ ಟೇಚರ್ ಇನ್ನಿಲ್ಲ

ಉಡುಪಿ: ಪಿತ್ರೋಡಿಯ ಸದಿಯ ಸಾವುಕಾರ್ ಪ್ರೈಮರಿ ಸ್ಕೂಲಿನಲ್ಲಿ ಮಕ್ಕಳ ಪ್ರೀತಿಯ ಟೀಚರ್ ಆಗಿದ್ದು, ಊರಿನವರ ಗೌರವಕ್ಕೆ ಪಾತ್ರರಾಗಿದ್ದ ಕುತ್ಪಾಡಿ ಕಾನಂಗಿ ದೇವಸ್ಥಾನದ ಸಮೀಪದ ” ದೇವಿಕೃಪಾ”ದ ನಿವಾಸಿ ಸಾಮಾಜಿಕ ಮುಂದಾಳಾಗಿದ್ದ ದಿ.ಅಂಗರ ತಿಂಗಳಾಯರ ಧರ್ಮಪತ್ನಿಯಾದ ದೇವಕಿ (83) ಯವರು ಇಂದು ಸೆ.8 ರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ದೈವಾಧೀನರಾದರು.

ಮೃತರು ನಿಡಂಬೂರು ಯುವಕ ಮಂಡಲದ ನಿಕಟಪೂರ್ವ ಗೌರವಾಧ್ಯಕ್ಷರಾದ ದೀಪಕ್ ರಾಜ್, ಉದ್ಯಮಿ ದಿಲೀಪ್ ರಾಜ್ ಮತ್ತು ಮಗಳು, ಮೊಮ್ಮಕ್ಕಳು, ಬಂಧುಬಳಗ ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.

ದಿವಂಗತರ ಅಂತಿಮ ಕ್ರಿಯಾವಿಧಿಯು ಬೆಳಿಗ್ಗೆ 10 ಕ್ಕೆ ಕುತ್ಪಾಡಿಯಲ್ಲಿನ ಅವರ ಮನೆಯಲ್ಲಿ ನಡೆಯಲಿದ್ದು, ತದನಂತರ ಉದ್ಯಾವರದ ಹಿಂದು ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಲಾಗುವುದು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!