ಕುಂದಾಪುರ: ಸೆ.05 “ಕಲಾವಲ್ಲರಿ” ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ ಜಿಲ್ಲೆಯಾದ್ಯಂತ ಇರುವ ವಿಶೇಷ ಚೇತನ ಶಾಲೆಯ ಶಿಕ್ಷಕರಿಗಾಗಿ ಸೆ.05 ರಂದು ಕುಂದಾಪುರದ ಮಣೂರಿನ ರಾಜಲಕ್ಷ್ಮೀ ಸಭಾಂಗಣದಲ್ಲಿ “ಕಲಾವಲ್ಲರಿ” ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟೇಶ್ವರ ಇದರ ಅಧ್ಯಕ್ಷರಾದ ಅಕ್ಷತಾ ಗಿರೀಶ್ ಐತಾಳ್ ಅವರು ವಹಿಸಲಿದ್ದಾರೆ.

ಈ ವೇಳೆ ಪಿಸುಮಾತು ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಡಾ. ವಿರುಪಾಕ್ಷ ದೇವರ ಮನೆ ಹಾಗೂ ಡಾ. ರಾಜಲಕ್ಷ್ಮೀ ಇವರಿಂದ ಶಿಕ್ಷಕರಿಗಾಗಿ ಸಮಾಲೋಚನೆ ಮತ್ತು ಸ್ಪೂರ್ತಿ ದಾಯಕ ಭಾಷಣ ನಡೆಯಲಿದೆ.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3182 ಇದರ ಗವರ್ನರ್ ರೊ. ಬಿ.ಎಂ ಭಟ್ ಉಡುಪಿ ಜಿಲ್ಲಾ ಸಹಕಾರಿ ಸಂಘದ ಇದರ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಭಾಗವಹಿಸಲಿದ್ದಾರೆ. ಹಾಗೂ ಕಾರ್ಯಕ್ರಮದಲ್ಲಿ ಅಸಿಸ್ಟೆಂಟ್ ಗವರ್ನರ್ ರೊ. ಸುಧಾಕರ್ ಶೆಟ್ಟಿ, ಪೂರ್ವ ಅಸಿಸ್ಟೆಂಟ್ ಗವರ್ನರ್ ರೊ. ಗಣೇಶ್ ಶೆಟ್ಟಿ ಮೊಳಹಳ್ಳಿ, ವಲಯ 2ರ ನಿರ್ದೇಶಕರು ರೊ. ಕೃಷ್ಣಮೂರ್ತಿ ಪಿಕೆ, ಆಟಿಸಂ ಸೊಸೈಟಿ ಆಫ್ ಉಡುಪಿ ಇದರ ಕಾರ್ಯಕ್ರಮ ಸಂಯೋಜಕರಾದ ಕೀರ್ತೇಶ್ ಎಸ್, ರಾಜ್ಯ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷ ಕಾಂತಿ ಹರೀಶ್, ರೋಟರಿ ಕ್ಲಬ್ ಕೋಟೇಶ್ವರ ಇದರ ಕಾರ್ಯದರ್ಶಿ ರೊ. ಅರುಣ್ ದೇವಾಡಿಗ, ಆನ್ಸ್ ಕ್ಲಬ್ ಕೋಟೇಶ್ವರ ಇದರ ಅಧ್ಯಕ್ಷೆ ಶ್ರೀಮತಿ ಸುಜಾತ ಶೆಟ್ಟಿ, ರೋಟ್ರ್ಯಾಕ್ಟ್ ಕ್ಲಬ್ ಕೋಟೇಶ್ವರ ಇದರ ಅಧ್ಯಕ್ಷ ರೊ. ಸತ್ಯನ್ ಕಾಂಚನ್ ಇವರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷತ ಗಿರೀಶ್ ಅವರ ವಹಿಸಲಿದ್ದಾರೆ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಕೃಷ್ಣ ಪ್ರಸಾದ್ ಕ್ಯಾಶೂಸ್ ಇದರ ವ್ಯವಸ್ಥಾಪಕರು ಹಾಗೂ ನಿರ್ದೇಶಕರಾದ ಸಂಪತ್ ಶೆಟ್ಟಿ, ಕುಂದಾಪುರದ ಸೂಪರ್ ಗ್ರೇಡ್ ಎಲೆಕ್ಟ್ರಿಕಲ್ ಕಂಪ್ಯೂಟರ್ ಅದರ ಕೆ ರತ್ನಾಕರ ನಾಯ್ಕ್, ಪೂರ್ವ ಅಸಿಸ್ಟೆಂಟ್ ಗವರ್ನರ್ ರೊ. ಗಜೇಂದ್ರ ಶೆಟ್ಟಿ, ಆರ್ಟಿಸಂ ಸೊಸೈಟಿ ಆಫ್ ಉಡುಪಿ ಇದರ ಅಧ್ಯಕ್ಷ ವಿರೂಪಾಕ್ಷ ದೇವರಮನೆ, ಸ್ತ್ರೀ ಆರೋಗ್ಯ ತಜ್ಞರಾದ ಡಾ. ರಾಜಲಕ್ಷ್ಮಿ, ಜಿಲ್ಲಾ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷ ಎಚ್ ರವೀಂದ್ರ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಆಗ್ನೇಸ್ ಕುಂದರ್ ಇವರು ಉಪಸ್ಥಿತರಿರಲಿದ್ದಾರೆ.

ಇದೊಂದು ಹೊಸ ಪ್ರಯತ್ನವಾಗಿದ್ದು, ಜಿಲ್ಲೆಯಾದ್ಯಂತ ಸುಮಾರು 15 ಶಾಲೆಯ ಸುಮಾರು 150 ಕ್ಕೂ ಹೆಚ್ಚಿನ ಶಿಕ್ಷಕರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!