ಉಡುಪಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Oplus_131072

ಉಡುಪಿ, ಸೆ.4: ಉಡುಪಿ ಜಿಲ್ಲಾ ಮಟ್ಟದ 2026-27ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಒಟ್ಟು 16 ಶಿಕ್ಷಕರು ಆಯ್ಕೆಯಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಬೈಂದೂರು ತಾಲೂಕು ಸಾಲಿಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಗಣೇಶ್, ಬ್ರಹ್ಮಾವರ ತಾಲೂಕು ಆಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರವಿ, ಕುಂದಾಪುರ ತಾಲೂಕು ಅಲ್ಬಾಡಿ ಮೂರುಕೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಉಷಾ ಕುಮಾರಿ, ಉಡುಪಿ ತಾಲೂಕು ವಳಕಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುವಾಸಿನಿ, ಕುಂದಾಪುರ ತಾಲೂಕು ಟಿ.ಟಿ.ರೋಡ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಲೀಲಾವತಿ ನಾಯ್ಕ, ಕಾರ್ಕಳ ತಾಲೂಕಿನ ಹೆರ್ಮುಂಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶ್ರೀಕಾಂತ್ ಭಟ್.

ಹಿರಿಯ ಪ್ರಾಥಮಿಕ ವಿಭಾಗ: ಬ್ರಹ್ಮಾವರ ತಾಲೂಕು 52ನೇ ಹೇರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮಂಜುಳ ಜಯಕರ್, ಕುಂದಾಪುರ ತಾಲೂಕು ನೂಜಾಡಿ-2 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶೈಲಜಾ ಶೆಟ್ಟಿ, ಕಾರ್ಕಳ ತಾಲೂಕು ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವೀಣಾ ಆರ್., ಕುಂದಾಪುರ ತಾಲೂಕು ಬೀಜಾಡಿ ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಪಾರ್ವತಿ ಎಂ., ಉಡುಪಿ ತಾಲೂಕಿನ ಪಡು ಅಲೆವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸತೀಶ್ಚಂದ್ರ.

ಪ್ರೌಢಶಾಲಾ ವಿಭಾಗ: ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಹಶಿಕ್ಷಕ ಕೃಷ್ಣ ಶೆಟ್ಟಿ, ಬೈಂದೂರು ತಾಲೂಕಿನ ವಂಡ್ಸೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಹ ಶಿಕ್ಷಕ ರವಿರಾಜ್ ಶೆಟ್ಟಿ, ಕಾರ್ಕಳ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ನಾರಾಯಣ ಶೆಣೈ, ಉಡುಪಿ ತಾಲೂಕಿನ ಪಟ್ಲ ಯು.ಎಸ್. ನಾಯಕ್ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಾಂತಪ್ಪ ಮೂಲಂಗಿ, ಕುಂದಾಪುರ ತಾಲೂಕು ಬಸ್ರೂರು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪಿಯುಷ್ ಡಿಸೋಜ.

Oplus_131072

Leave a Reply

Your email address will not be published. Required fields are marked *

error: Content is protected !!