ಜೀವದ ಜೊತೆ ಜೀವಂತಿಕೆಯನ್ನು ಉಳಿಸಿದ ಸಾಧನೆ: ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮರುಜೀವ ಪಡೆದ ಕಾಲುಗಳು
ಎರಡನೇ ಪ್ರಕರಣ ವೈದ್ಯಕೀಯವಾಗಿ ಮತ್ತಷ್ಟು ಸವಾಲಿನಿಂದ ಕೂಡಿತ್ತು. ಆ ರೋಗಿಯ ಬಲ ತೊಡೆಯಲ್ಲಿ ‘ಲಿಪೊಸಾರ್ಕೋಮಾ’ ಎಂಬ ಬೃಹತ್ ಕ್ಯಾನ್ಸರ್ ಗಡ್ಡೆ ಇತ್ತು. ಆ ಗಡ್ಡೆಯು ಕಾಲಿನ ಮುಖ್ಯ ರಕ್ತನಾಳಗಳನ್ನು (Popliteal vessels) ಮತ್ತು ಪ್ರಮುಖ ನರವನ್ನು (Sciatic nerve) ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಒಂದು ಮಿಲಿಮೀಟರ್‌ನಷ್ಟು ತಪ್ಪು ಸಂಭವಿಸಿದರೂ ರೋಗಿಯ ಕಾಲು ಶಾಶ್ವತವಾಗಿ ಪಾರ್ಶ್ವವಾಯುವಿಗೆ ಈಡಾಗುವ ಅಪಾಯವಿತ್ತು. ಡಾ. ಅನಂತ್ ಎಸ್. ಮಠದ್ ಅವರು ರಕ್ತನಾಳ ಹಾಗೂ ನರಗಳಿಗೆ ಯಾವುದೇ ಹಾನಿಯಾಗದಂತೆ ಆ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಬೇರ್ಪಡಿಸಿ ಹೊರತೆಗೆದಿದ್ದಾರೆ.
“ಲಿಂಬ್ ಸಾಲ್ವೇಜ್ ಶಸ್ತ್ರಚಿಕಿತ್ಸೆಯು ಸರ್ಜಿಕಲ್ ಅಂಕಾಲಜಿ ಕ್ಷೇತ್ರದಲ್ಲಿ ಅತ್ಯಂತ ಕಠಿಣ ಪ್ರಕ್ರಿಯೆಯಾಗಿದೆ,ಹಿಂದೆಲ್ಲಾ ಇಂತಹ ಪ್ರಕರಣಗಳಲ್ಲಿ ಕಾಲನ್ನು ಶಸ್ತಚಿಕಿತ್ಸೆಯಮೂಲಕ ತೆಗೆಯುವುದೇ ಏಕೈಕ ಮಾರ್ಗವಾಗಿತ್ತು. ಆದರೆ ಇಂದಿನ ಆಧುನಿಕ ತಂತ್ರಜ್ಞಾನದಿಂದ ನಾವು ಕ್ಯಾನ್ಸರ್ ನಿರ್ಮೂಲನೆ ಮಾಡುವುದರ ಜೊತೆಗೆ ರೋಗಿಯ ಸ್ವಾವಲಂಬನೆಯನ್ನು ಕಾಪಾಡಬಹುದು. ಕುಟುಂಬವನ್ನು ಸಲಹುವ ಯುವಕನೊಬ್ಬ ಕಾಲು ಕಳೆದುಕೊಂಡರೆ ಆ ಇಡೀ ಕುಟುಂಬವೇ ಸಾಮಾಜಿಕವಾಗಿ ಕುಸಿದುಹೋಗುತ್ತದೆ. ರೋಗಿ ತನ್ನದೇ ಕಾಲಿನ ಮೇಲೆ ನಡೆದುಕೊಂಡು ಹೋಗುವುದನ್ನು ನೋಡುವುದೇ ನಿಜವಾದ ಗೆಲುವು.”ಎಂದು ಡಾ ಅನಂತ್ ಎಸ್ ಮಠದ್ ಸರ್ಜಿಕಲ್ ಆಂಕೋಲಾಜಿಸ್ಟ್ ವಿವರಿಸಿದ್ದಾರೆ.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಜಿ.ಎಸ್ ಚಂದ್ರಶೇಖರ್ ಮಾತನಾಡಿ, “ಈ ಸಾಧನೆಯು ಉಡುಪಿಯ ವೈದ್ಯಕೀಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಸಾರ್ವಜನಿಕರಿನಾವು ನೀಡುವ ಸಂದೇಶ ಇಷ್ಟೇ—ಕ್ಯಾನ್ಸರ್ ಎಂದರೆ ಬದುಕಿನ ಅಂತ್ಯವಲ್ಲ. ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಮತ್ತು ನಮ್ಮಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡರೆ ಜೀವ ಮತ್ತು ಜೀವನ ಎರಡನ್ನೂ ಉಳಿಸಿಕೊಳ್ಳಬಹುದು,” ಎಂದಿದ್ದಾರೆ.




