ರಜನಿಕಾಂತ್ ತಂತ್ರಿ ಮಾರ್ಪಳ್ಳಿ ನಿಧನ
ಉಡುಪಿ: ಕುಕ್ಕಿಕಟ್ಟೆ ಶಾಲೆಯ ನಿವೃತ್ತ ಶಿಕ್ಷಕರಾದ ದಿ.ಶ್ರೀಪತಿ ತಂತ್ರಿಯವ ಎರಡನೇ ಪುತ್ರ ರಜನಿಕಾಂತ್ ತಂತ್ರಿ(45) ಅವರು ಇಂದು ರಾತ್ರಿ ಮೃತಪಟ್ಟಿದ್ದಾರೆ.
ಮಾರ್ಪಳ್ಳಿ ನಿವಾಸಿಯಾದ ರಜನಿಕಾಂತ್ ತಂತ್ರಿಯವರು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಮನೆಯಲ್ಲಿ ತೀವ್ರ ಅಸ್ವಸ್ಥತರಾಗಿದ್ದರು. ಇಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು. ಔಷಧ ಮಾರಾಟ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಜನಿಕಾಂತ್ ಅವರು ಶಾಂತ ಸ್ವಭಾವ ಮತ್ತು ಸ್ನೇಹಜೀವಿಯಾಗಿದ್ದರು.
ಮೃತರು ಪತ್ನಿ, ತಾಯಿ ಸುಬೋಧಿನಿ ಶಾಲೆಯ ನಿವೃತ್ತ ಶಿಕ್ಷಕಿ ಪ್ರಫುಲ್ಲ, ಸಹೋದರ ಶಶಿಕಾಂತ್ ತಂತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




