ಉಡುಪಿ: ಆದರ್ಶ ಆಸ್ಪತ್ರೆಯಲ್ಲಿ ಆ.20 ರಂದು ಬೃಹತ್ ರಕ್ತದಾನ ಶಿಬಿರ
ಉಡುಪಿ: ಆದರ್ಶ ಆಸ್ಪತ್ರೆ, ಉಡುಪಿ ವತಿಯಿಂದ ಸರಕಾರಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗ, ಎಚ್.ಡಿ.ಎಫ್.ಸಿ. ಬ್ಯಾಂಕ್ ಪ್ರಧಾನ ಶಾಖೆ ಹಾಗೂ ಎಸ್‌ಡಿಪಿಐ ಉಡುಪಿ ಮತ್ತು ಉಡುಪಿ ಬಸವ ಸಮಿತಿ ಸಹಯೋಗದಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಆ.20ರಂದು ಗುರುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದೆ. ಆಸ್ಪತ್ರೆಯು ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಸಮೀಪದಲ್ಲಿದ್ದು, ವಿವಿಧ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ.
ರಕ್ತದಾನ ಮಾಡಿ ಜೀವ ಉಳಿಸಿ! ಎಂಬ ಸಂದೇಶದೊಂದಿಗೆ ಶಿಬಿರ ಆಯೋಜಿಸಲಾಗಿದ್ದು, 18ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು ಎಂದು ತಿಳಿಸಲಾಗಿದೆ. ರಕ್ತದಾನದಿಂದ ಅಗತ್ಯವಿರುವವರಿಗೆ ಜೀವದಾನ ನೀಡುವ ಜೊತೆಗೆ ಸಮಾಜದ ಮೇಲಿನ ಜವಾಬ್ದಾರಿಯನ್ನು ನಿಭಾಯಿಸಿದಂತಾಗುತ್ತದೆ.
ರಕ್ತದಾನ ಮಾಡಲು ಬಯಸುವವರು ಆರೋಗ್ಯವಂತರಾಗಿರಬೇಕು. ರಕ್ತದಾನಕ್ಕೆ ಮುನ್ನ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ರಕ್ತದಾನ ಮಾಡಿದ ಬಳಿಕ ದಾನಿಗಳಿಗೆ ಅಗತ್ಯ ವಿಶ್ರಾಂತಿ ಹಾಗೂ ಆರೈಕೆ ಒದಗಿಸಲಾಗುತ್ತದೆ.
ರಕ್ತದಾನ ಮಾಡಿ ಪ್ರಾಣ ಉಳಿಸಿ – ಸಮಾಜಕ್ಕೆ ನಿಮ್ಮ ಕೊಡುಗೆ ನೀಡಿ ಎಂಬ ಮನವಿಯೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
9980258400 / 9663330864





