ಉಡುಪಿ: ಜಿಲ್ಲೆಯ ವಿವಿಧೆಡೆ ಸಂಭ್ರಮದ 80ನೇ ಸ್ವಾತಂತ್ರೋತ್ಸವದ ಸಡಗರ
ಕುಂಜಾರುಗಿರಿ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಧ್ವಜಾರೋಹಣ ಮಾಡಿ, ಸ್ವಾತಂತ್ರ್ಯವನ್ನು ಉಳಿಸಿ ಬಲಿಷ್ಠ ಭಾರತವನ್ನು ಕಟ್ಟುವಲ್ಲಿ ಎಲ್ಲರೂ ದೇಶಾಭಿಮಾನವಿರುವ ರಾಷ್ಟ್ರಭಕ್ತರಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ದೇವಳದ ತಂತ್ರಿಗಳಾದ ಪುತ್ತೂರು ಶ್ರೀನಿವಾಸ ತಂತ್ರಿ, ನ್ಯಾಯವಾದಿ ರಾಮಚಂದ್ರ ಅಡಿಗ, ಅರ್ಚಕರಾದ ಗೋಪಾಲಕೃಷ್ಣ ಭಟ್, ನಾಗರಾಜ ರಾವ್, ಮಾಜಿ ಪಂಚಾಯತ್ ಸದಸ್ಯರಾದ ಸುದರ್ಶನ್ ರಾವ್ ಮೊದಲಾದವರು ಉಪಸ್ಥಿತರಿದ್ದರು.


ಉಡುಪಿ ಜಾಮಿಯ ಮಸೀದಿಯ ವತಿಯಿಂದ 80 ನೇ ಸ್ವತಂತ್ರ ದಿನಾಚರಣೆಯನ್ನು ಮಸೀದಿಯ ವಠಾರದಲ್ಲಿ ಆಚರಿಸಲಾಯಿತು. ಮಸೀದಿಯ ಅಧ್ಯಕ್ಷ ರಿಯಾಝ್ ಅಹಮದ್ ಧ್ವಜಾರೋಹಣ ನೆರವೇರಿಸಿದರು.ಮಸೀದಿಯ ಖತೀಬ್ ರಶೀದ್ ಅಹಮದ್ ನದ್ವಿ ರವರು ದೇಶದ ಸ್ವಾತಂತ್ಯಕಾಗಿ ಬಲಿದಾನ ನೀಡಿದವರನ್ನು ಸ್ಮರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.ಮಸೀದಿಯ ಉಪಾಧ್ಯಕ್ಷ ವಿ ಎಸ್ ಉಮರ್,ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್,ಸಮಿತಿ ಸದಸ್ಯರಾದ ಮುನೀರ್ ಮಹಮ್ಮದ್, ಫಾಯಾಯ್ ಅಹಮದ್,ಇಫ್ತಿಕರ್, ರಿಯಾಜ್ ಕುಕ್ಕಿಕಟ್ಟೆ, ಪೂರ್ವಾಧ್ಯಕ್ಷ ಯಾಸೀನ್ ಪಾಪ್ಯುಲರ್ ಜಮಾತ್ ಸದಸ್ಯರು ,ಮುಸ್ಲಿಂ ಬಾಂಧವರು ,ಮದ್ರಸದ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಮಸೀದಿಯ ಮುಹ ಜ್ಜಿನ್ ಯೂನಸ್ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ದಿನವನ್ನು ಉಡುಪಿ ಪತ್ರಿಕಾ ಭವನದಲ್ಲಿ ಆಚರಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಜಿ ಕುರ್ಯ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕೋಶಾಧಿಕಾರಿ ಹರೀಶ್ ಕುಂದರ್, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ವಾರ್ತಾಧಿಕಾರಿ ಮಂಜುನಾಥ್, ಪತ್ರಿಕಾ ಭವನ ಸಮಿತಿಯ ಮಾಜಿ ಸಂಚಾಲಕ ಅಜಿತ್ ಆರಾಡಿ, ರಿಚಡ್೯, ರತನ್ ಸುರಭಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಕೃತಿ ಮಡಿಲಲ್ಲಿ ದೇಶಭಕ್ತಿಯ ಕಹಳೆ: ಸಾಲಿಗ್ರಾಮ ಕಯಾಕಿಂಗ್ ತಂಡದಿಂದ ವಿಶಿಷ್ಟ ಧ್ವಜಾರೋಹಣ
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ರಾಷ್ಟ್ರಪ್ರೇಮದ ಸಂದೇಶ ಸಾರಿದ ಸಾಲಿಗ್ರಾಮ ಕಯಾಕಿಂಗ್ ತಂಡ ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರ ಹೃದಯದಲ್ಲಿ ಬಿತ್ತುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗ’ ಅಭಿಯಾನದ ಅಂಗವಾಗಿ, ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸುವ ಸಂಕಲ್ಪದೊಂದಿಗೆ ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಾಲಿಗ್ರಾಮ ಕಯಾಕಿಂಗ್ ತಂಡ ಪ್ರತಿವರ್ಷದಂತೆ ಈ ಬಾರಿಯೂ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ರಾಷ್ಟ್ರಪ್ರೇಮವನ್ನು ಮೆರೆಯುವ ಪ್ರಯತ್ನ ಮಾಡಿದೆ.
ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಜನರಿಗೆ ಪರಿಚಯಿಸುವುದರ ಜೊತೆಗೆ, ಪ್ರಕೃತಿ ಪ್ರೇಮದೊಂದಿಗೆ ದೇಶಪ್ರೇಮವನ್ನೂ ಬೆಳೆಸುವ ಸಂದೇಶವನ್ನು ಸಾರುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ, ಈ ಬಾರಿ ಮತ್ತೊಂದು ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.
ಹಿಂದೆ ಸೀತಾ ನದಿಯ ಮಧ್ಯಭಾಗಕ್ಕೆ ಕಯಾಕಿಂಗ್ ಮೂಲಕ ತೆರಳಿ ಧ್ವಜಸ್ತಂಭ ನೆಟ್ಟು ಧ್ವಜಾರೋಹಣ ನಡೆಸಿದ್ದ ತಂಡ, ಮತ್ತೊಮ್ಮೆ ನದಿಯ ಮಧ್ಯದಲ್ಲಿರುವ ಕಾಂಡ್ಲಾ ಮರಗಳ ನಡುವೆ ಸೇತುವೆ ನಿರ್ಮಿಸಿ ಅದರ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರಕೃತಿಯ ಮಡಿಲಲ್ಲಿ ದೇಶಭಕ್ತಿಯ ಸಂದೇಶ ಸಾರಿತ್ತು.
ಈ ಬಾರಿ ಇನ್ನಷ್ಟು ಹೊಸತನವನ್ನು ಮೆರೆದ ತಂಡ, “ಬದುಕು ಕೊಟ್ಟ ನಾಡ ಮಣ್ಣಲಿ, ಬಂಧಗಳ ಸೇತುವೆ ಕಟ್ಟಿ, ದೇಶಭಕ್ತಿಯ ನೂಲ ಬಿಗಿದು, ನಾಡಿನ ಹೆಮ್ಮೆ ಮೇಲೇಳಲಿ” ಎಂಬ ಆಶಯದೊಂದಿಗೆ, ನೀರಿನ ಆರ್ಭಟದ ನಡುವೆ ಸುಂದರವಾದ ಮರದ ಸೇತುವೆಯೊಂದನ್ನು ನಿರ್ಮಿಸಿ, ಅದರ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ವಿಶಿಷ್ಟವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು.
ಪ್ರತಿವರ್ಷವೂ ನವೀನ ಆಲೋಚನೆಗಳ ಮೂಲಕ ಸಮಾಜಕ್ಕೆ ವಿಭಿನ್ನ ಸಂದೇಶ ನೀಡುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ, ಈ ಬಾರಿ ಕೂಡ ಪ್ರಕೃತಿ ಮಡಿಲಲ್ಲೇ ಭಾರತಾಂಬೆಯನ್ನು ಪ್ರತಿಷ್ಠಾಪಿಸಿ, ಪ್ರಕೃತಿ ಪ್ರೇಮದ ಜೊತೆಗೆ ದೇಶಪ್ರೇಮವನ್ನೂ ಬೆಳೆಸಿಕೊಳ್ಳುವಂತೆ ಜನರಿಗೆ ಕರೆ ನೀಡಿತು.
ನಮ್ಮ ನಾಡು, ನಮ್ಮ ನದಿ, ನಮ್ಮ ಪ್ರಕೃತಿ ಮತ್ತು ನಮ್ಮ ರಾಷ್ಟ್ರಧ್ವಜ — ಇವೆಲ್ಲವನ್ನೂ ಒಂದೇ ವೇದಿಕೆಯಲ್ಲಿ ಬೆಸೆಯುವ ಮೂಲಕ ಸಾಲಿಗ್ರಾಮ ಕಯಾಕಿಂಗ್ ತಂಡದ ಈ ಪ್ರಯತ್ನವು ಸ್ವಾತಂತ್ರ್ಯ ದಿನಾಚರಣೆಗೆ ಮತ್ತಷ್ಟು ಅರ್ಥಪೂರ್ಣ ಮೆರುಗು ನೀಡಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಕಯಾಕಿಂಗ್‌ನ ಮುಖ್ಯಸ್ಥರಾದ ಮಿಥುನ್ ಕುಮಾರ್ ಮೆಂಡನ್, ಲೋಕೇಶ್ ಸೇರಿದಂತೆ ತಂಡದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಉಡುಪಿಯು ಶ್ರೀ ಕೃಷ್ಣ ಬಾಲನಿಕೇತನ ಅನಾಥಾಶ್ರಮದಲ್ಲಿ ಸುಮಾರು 10000 ರೂಪಾಯಿಯ ದಿನಬಳಕೆ ವಸ್ತುಗಳನ್ನು, ಫಲವಸ್ತು ಹಾಗೂ ಸಿಹಿ ತಿಂಡಿ ನೀಡಿರುತ್ತೇವೆ. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಎಂ ಜೆ ಎಫ್ Ln ನಾಗರಾಜ್ ಸಂಕೋಳ್ಳಿ, Ln ಪ್ರಕಾಶ್ ಎಂಡಿ ಭಟ್ ಸೆಕ್ರೆಟರೀ, ಎಂ ಜೆ ಎಫ್ Ln ಸುಪ್ರೀತ್ ಹೆಗಡೆ (Treasurer ),
ಎಂಜೆಎಫ್ ಲಯನ್ ವಿಜಯಕುಮಾರ್ ಮುದ್ರಾಡಿ ಫಸ್ಟ್ ವಿಡಿಜಿ ಹಾಗೂ ZC ಲಯನ್ ದಿನೇಶ್ ಕಿಣಿಯವರು ಭಾಗವಹಿಸಿದ್ದರು.

ಆದರ್ಶ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ಉಡುಪಿ: ಆದರ್ಶ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ವಿಶು ಕುಮಾರ್ ಬಿ. ಅವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಆದರ್ಶ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಜಿ.ಎಸ್. ಚಂದ್ರಶೇಖರ್, ವಿಮಲಾ ಚಂದ್ರಶೇಖರ್ ಹಾಗೂ ಹೃದ್ರೋಗ ತಜ್ಞರಾದ ಡಾ.ಸುಹಾಸ್ ಜಿ.ಸಿ. ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯರು, ಆಡಳಿತ ವರ್ಗ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನದಿಂದ ಕೂಡಿದ ವಾತಾವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನೆರವೇರಿತು.


ಉಡುಪಿ ಪ್ರಿಓನ್ಡ್ ವೈಹಿಕಲ್ ಡೀಲರ್ ಅಸೋಸಿಯೇಷನ್ ವತಿಯಿಂದ ಸಂತೆಕಟ್ಟೆಯ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರ ಹಾಗೂ ಧನ್ವಂತರಿ ಆಯುರ್ವೇದ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಆಶ್ರಫ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗೆಳೆಯರ ಬಳಗ ಮಾರ್ಪಳ್ಳಿ ಮತ್ತು ಮಹಿಳಾ ಮಂಡಳಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಹಿರಿಯರಾದ ವಸಂತ್ ಶೆಟ್ಟಿಗಾರ್ ಮಾರ್ಪಳ್ಳಿ ಧ್ವಜಾರೋಹಣ ನೆರವೆರಿಸಿದರು.

ನಾಗರಿಕ ಸಮಿತಿ ಮಾರ್ಪಳ್ಳಿ ವತಿಯಿಂದ ನಡೆದ 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕೆ.ಆರ್ ಭೀಮಯ್ಯ ನೆರೆವೆರಿಸಿದರು.

ಉಡುಪಿಯ ರಥಬೀದಿಯಲ್ಲಿನ ರಿಕ್ಷಾ ಚಾಲಕರ ಹಾಗೂ ಮಾಲಿಕರ ಸ೦ಘದ ಆಶ್ರಯದಲ್ಲಿ ಶನಿವಾರದ೦ದು ಸ೦ಭ್ರಮದಿ೦ದ 80ನೇ ಸ್ವಾತ೦ತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪರ್ಯಾಯ ಪೀಠಾಧೀಶರಾದ ಶ್ರೀವೇದವರ್ಧನ ತೀರ್ಥಶ್ರೀಪಾದರು ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೇರಿಸಿ ಶುಭಹಾರೈಸಿದರು. ಮುಖ್ಯಅತಿಥಿಯಾಗಿ ಭಾಸ್ಕರ್ ಸೇರಿಗಾರ್, ರಿಕ್ಷಾ ಚಾಲಕರ ಹಾಗೂ ಮಾಲಿಕರ ಸ೦ಘದ ಅಧ್ಯಕ್ಷರಾದ ಪ್ರಸಾದ್ ತ೦ತ್ರಿ ಅಲೆವೂರು,ಸರ್ವಪಧಿಕಾರಿಗಳು ಸದಸ್ಯರು ಹಾಜರಿದ್ದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ವಲಯ ಸಮಿತಿ ನೇತ್ರತ್ವದಲ್ಲಿ ಇಂದು ತಮ್ಮ ಕಛೇರಿ ಮುಂದೆ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಶಶಿಧರ್ ಗೊಲ್ಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಸಂಜೀವ ಬಳ್ಕೂರು ಶುಭ ಕೋರಿ ಮಾತನಾಡಿದರು.ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷರಾದ ಸುಭಾಸ್ ನಾಯಕ್,ಕೋಶಾಧಿಕಾರಿ ವಾಮನ ಪೂಜಾರಿ, ಮುಖಂಡರಾದ ರಾಮ ಸಾಲ್ಯಾನ್, ಸರೋಜ.ಎಸ್,ಮುರಳಿ, ಉಡುಪಿ ಬೀಡಿ ಎಂಡ್ ಟೊಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷರಾದ ನಳಿನಿ,ಕಾರ್ಯದರ್ಶಿ ಉಮೇಶ್ ಕುಂದರ್, ಸಾರಿಕ, ಶರ್ಮಿಳ,ಸೌಮ್ಯ ಉಪಸ್ಥಿತರಿದ್ದರು ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಕಾರ್ಯಕ್ರಮ ನಿರೂಪಣೆ ಮಾಡಿ ಧನ್ಯವಾದ ನೀಡೀದರು.

ಕಾಪು ಲೈಟ್ ಹೌಸ್ ರೆಸಾರ್ಟ್ ನಲ್ಲಿ ಯುವವಾಹಿನಿ ಕಾಪು ಘಟಕದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ
ಕಾಪು ಲೈಟ್ ಹೌಸ್ ರೆಸಾರ್ಟ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಯುವವಾಹಿನಿ (ರಿ.) ಕಾಪು ಘಟಕದ ಅಧ್ಯಕ್ಷೆ ಅನಿತಾ ಸುರೇಂದ್ರ ಮತ್ತು ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಹಾಗೂ ಮಾಜಿ ಸೈನಿಕ ಕೇಶವ ಪೂಜಾರಿ ಅವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಧ್ವಜಾರೋಹಣದ ಬಳಿಕ ವಿಕ್ಕಿ ಪೂಜಾರಿ ಅವರು ಧ್ವಜಾರೋಹಣದ ಉದ್ದೇಶ ಹಾಗೂ ದೇಶಭಕ್ತಿಯ ಕುರಿತು ಮಾತನಾಡಿದರು. ಮಾಜಿ ಸೈನಿಕರಾದ ಕೇಶವ ಪೂಜಾರಿ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಹಾಗೂ ಯುವಜನತೆಯ ಜವಾಬ್ದಾರಿಗಳ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಲೈಟ್ ಹೌಸ್ ರೆಸಾರ್ಟ್ ಸಿಬ್ಬಂದಿ ಸಂದೀಪ್ ಅವರ ಸೇವೆಯನ್ನು ಗುರುತಿಸಿ ದೀಪಕ್ ಕುಮಾರ್ ಎರ್ಮಾಳ್ ಸನ್ಮಾನಿಸಿದರು.
ಕಾರ್ಯಕ್ರಮಕ್ಕೆ ಸ್ವಾಗತ ಹಾಗೂ ನಿರೂಪಣೆಯನ್ನು ಕಾರ್ಯದರ್ಶಿ ಸುನೀಲ್ ಎಸ್. ಪೂಜಾರಿ ನೆರವೇರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಲಾಯಿತು.
ಯುವವಾಹಿನಿ ಕಾಪು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.

ರಿಕ್ಷಾ ಚಾಲಕರು ಮತ್ತು ಮಾಲಕರು ಹಾಗೂ ಸಾಫಲ್ಯ ಟ್ರಸ್ಟ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ





