"/>

ಉಡುಪಿ: ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿ ವೇದಿಕೆ ಚುನಾವಣೆ- ಸಮೀಕ್ಷಾ ನಾಯಕಿ

ಉಡುಪಿ, ಆ.12: ಪ್ರಸಕ್ತ ಸಾಲಿನ ವಿದ್ಯಾರ್ಥಿ ವೇದಿಕೆಯ ಚುನಾವಣೆಯು ಇಂದು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ದಲ್ಲಿ ಇಂದು ನಡೆಯಿತು. ಚುನಾವಣೆಯಲ್ಲಿ ವಿವಿಧ ಸಮಿತಿಗಳಿಗೆ ವಿದ್ಯಾರ್ಥಿ ಪ್ರತಿನಿಧಿಗಳನ್ನು ಗುಪ್ತ ಮತದಾನದ ಮೂಲಕ ಆಯ್ಕೆ ಮಾಡಲಾಯಿತು.

ಮುಖ್ಯ ವಿದ್ಯಾರ್ಥಿ ಪ್ರತಿನಿಧಿಯಾಗಿ ಸಮೀಕ್ಷಾ ಎಸ್., ಮುಖ್ಯ ಸಾಂಸ್ಕೃತಿಕ ಪ್ರತಿನಿಧಿಯಾಗಿ ಭವ್ಯಶ್ರೀ ಹಾಗೂ ಮುಖ್ಯ ಕ್ರೀಡಾ ಪ್ರತಿನಿಧಿಯಾಗಿ ಸಾಕ್ಷಿ ಶೆಟ್ಟಿ ಚುನಾಯಿತರಾಗಿದ್ದಾರೆ. ಮೂವರೂ ತೃತೀಯ ಬಿಕಾಂ ನ ವಿದ್ಯಾರ್ಥಿಗಳು.

ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ ಮತ್ತು ಆಶಾ ಚುನಾವಣಾಧಿಕಾರಿಗಳಾಗಿದ್ದರು.

Leave a Reply

Your email address will not be published. Required fields are marked *

error: Content is protected !!