ರೇಂಜಾಳ ಗುಡ್ಡ ಭೂಕುಸಿತ- 15 ದಲಿತರ ಮನೆ ಅಪಾಯದಲ್ಲಿ- ಪುನರ್ವಸತಿಗೆ ಮನವಿ

ಉಡುಪಿ: ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ಯಾರಲ್ ಬೆಟ್ಟುವಿವ ಹೆಡ್ಮೇ ಎಂಬಲ್ಲಿ ಗುಡ್ಡ ಭೂಕುಸಿತ ಸಂಭವಿಸಿ ಸುಮಾರು 15 ದಲಿತರ ಮನೆಗಳು ಅಪಾಯದ ಅಂಚಿನಲ್ಲಿ ಇರುವುದರಿಂದ ಈ ಕೂಡಲೇ ತುರ್ತು ಕ್ರಮ ಕೈಗೊಂಡು ಅಪಾಯದ ಅಂಚಿನಲ್ಲಿರುವ ಮನೆಗೆ ಪುನರ್ವಸತಿ ಕಲ್ಪಿಸಬೇಕೆಂದು ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಅವರಿಗೆ ಮನವಿ ಕೊಡಲಾಯಿತು.

ನಿಯೋಗದಲ್ಲಿ ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ಟರ್ , ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ , ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!