ರೈಲು ಬೋಗಿಯ ಮೇಲೇರಿ ಸೆಲ್ಫಿ ತೆಗೆಯುತ್ತಿದ್ದ ಬಾಲಕ: ವಿದ್ಯುತ್ ಸ್ಪರ್ಶಿಸಿ ಸಜೀವ ದಹನ

ಭುವನೇಶ್ವರ: ಕೊರೊನಾ ಐಸೋಲೇಷನ್ ಕೇಂದ್ರವಾಗಿ ಪರಿವರ್ತಿಸಿದ್ದ ರೈಲು ಬೋಗಿಯ ಮೇಲೇರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಬಾಲಕ ವಿದ್ಯುತ್ ತಂತಿ ಸ್ಪರ್ಶಿಸಿ ಸಜೀವ ದಹನವಾದ ಘಟನೆ ನಿನ್ನೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಪಿ.ಸೂರ್ಯ(13) ಎನ್ನಲಾಗಿದೆ.

ಪಾರ್ಲಕೇಮುಂಡಿ ರೈಲ್ವೆ ನಿಲ್ದಾಣದಲ್ಲಿದ್ದ ರೈಲ್ವೆ ಬೋಗಿಯ ಮೇಲೆ ಪಿ. ಸೂರ್ಯ ಹಾಗೂ ಆತನ ಇಬ್ಬರು ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಇವರಿಗೆ, ವಿದ್ಯುತ್ ತಂತಿ ಸ್ಪರ್ಶವಾಗಿ ಸೂರ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಆತನ ಇಬ್ಬರು ಸ್ನೇಹಿತರಿಗೆ ಸುಟ್ಟಗಾಯಗಳಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಪರಿಣಾಮ ಬೋಗಿಯ ಛಾವಣಿಯೂ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲು ವಾಲ್ಟೇರ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ಕಿರಿಯ ಆಡಳಿತ ತಂಡವನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!