ಖಾಸಗಿ ಬಸ್ ಡಿಕ್ಕಿ- ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸ್ಥಳದಲ್ಲೇ ಮೃತ್ಯು

ಉಡುಪಿ: ನಗರದ ಹಳೆ ತಾಲೂಕು ಕಚೇರಿ ಬಳಿಯ ಸರ್ಕಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ, ಹಿಂದೂ ಯುವಸೇನೆಯ ಮುಖಂಡ ಮಂಜುಕೊಳ ಪತ್ನಿ ಲಕ್ಷ್ಮೀ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ನ್ಯಾಯಾಲಯದ ಬಳಿಯ ಕೆನರಾ ಬ್ಯಾಂಕ್ ಶಾಖೆಯಿಂದ ಲಕ್ಷ್ಮೀ ಮಂಜುನಾಥ್ ನಡೆದುಕೊಂಡು ಹೊರಗೆ ಬರುತ್ತಿದ್ದಾಗ ಮಿಷನ್ ಆಸ್ಪತ್ರೆ ರಸ್ತೆಯಾಗಿ ಉಡುಪಿಗೆ ಬರುತ್ತಿದ್ದ ಸತ್ಯನಾಥ್ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಕುಸಿದು ಬಿದ್ದ ಲಕ್ಷ್ಮೀ ಅವರ ಮೇಲೆ ಬಸ್‌ನ ಹಿಂದಿನ ಚಕ್ರ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ್ ಸಾಲ್ಯಾನ್ ಮಲ್ಪೆ ಕೊಳ ಇವರು ಇಂದು ಉಡುಪಿಯಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಮೃತರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ಇಂದು (ಆಗಸ್ಟ್ 1, ಶನಿವಾರ) ಸಂಜೆ ಗಂಟೆ 5.30ಕ್ಕೆ ಅವರ ಸ್ವಗೃಹ ಮಲ್ಪೆ ಕೊಳ (ಮಲ್ಪೆ ಬೀಚ್ ಬಳಿ) ನೆರವೇರಲಿದೆ.

1 thought on “ಖಾಸಗಿ ಬಸ್ ಡಿಕ್ಕಿ- ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸ್ಥಳದಲ್ಲೇ ಮೃತ್ಯು

  1. I dnt know who is wrong here . But I seen the aggressiveness of these private buses in recent days . Not acceptable . Ban them all or put hefty fine . These gulams have got lot of freedom by British

Leave a Reply

Your email address will not be published. Required fields are marked *

error: Content is protected !!