“ಮಾನ್ಸೂನ್‌ನಲ್ಲಿ ಉಡುಪಿ” ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ

ಉಡುಪಿ: ಉಡುಪಿ ಜಿಲ್ಲಾ ಆಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ಆಯೋಜನೆಯಲ್ಲಿ “ಮಾನ್ಸೂನ್ ನಲ್ಲಿ ಉಡುಪಿ“ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಗೆ ಉಡುಪಿ ಜಿಲ್ಲೆಯ ಜಲಪಾತ, ಪ್ರವಾಸಿ ತಾಣಗಳು ಮತ್ತು ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಆಚಾರ ವಿಚಾರಗಳ ಛಾಯಾಚಿತ್ರಗಳನ್ನು ಪರಿಗಣಿಸಲಾಗುವುದು. ಛಾಯಾಚಿತ್ರ ಕಳುಹಿಸಲು ಆ. 10 ಕೊನೆಯ ದಿನಾಂಕವಾಗಿದ್ದು, ಆ. 15 ರಂದು ಫಲಿತಾಂಶವನ್ನು ಪ್ರಕಟಿಸಲಾಗುವುದು.

ಆಯ್ಕೆಯಾದ ಪ್ರಥಮ ದ್ವಿತೀಯ ಮತ್ತು ತೃತೀಯ ಛಾಯಾಚಿತ್ರಗಳಿಗೆ ಕ್ರಮವಾಗಿ 10,000, 8,000, 5,000 ನಗದು ಹಾಗೂ ಸ್ಮರಣಿಕೆಯನ್ನು ನೀಡಲಾಗುವುದು. ಛಾಯಾಚಿತ್ರಗಳು ಕನಿಷ್ಠ 4Mb ಕ್ಕಿಂತ ಹೆಚ್ಚಿನ ರೆಸುಲ್ಯೂಷನ್ ಹೊಂದಿರಬೇಕು. ಫೋಟೋಶಾಪ್ ನಲ್ಲಿ ತಿರುಚಲಾದ ಛಾಯಾಚಿತ್ರವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

ಛಾಯಾಚಿತ್ರಗಳನ್ನು skpaudupi@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9900407474, 99004 11457 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

error: Content is protected !!