ಉಡುಪಿ ಮೆಸ್ಕಾಂ ಜಾಗೃತ ದಳದ ಹೆಡ್‌ ಕಾನ್ಸ್ಟೇಬಲ್ ಬಿ. ವಿಜಯ ಕುಮಾರ್ ಡಿಜಿ ಮತ್ತು ಐಜಿಪಿ ಪ್ರಶಂಸನೀಯ ಪದಕ

ಉಡುಪಿ: ಮೆಸ್ಕಾಂ ಜಾಗೃತ ದಳ ಉಡುಪಿ ವಿಭಾಗದಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಬಿ. ವಿಜಯ ಕುಮಾರ್ ಅವರು ಇಲಾಖೆಯಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆ ಹಾಗೂ ಕರ್ತವ್ಯನಿಷ್ಠೆಯನ್ನು ಪರಿಗಣಿಸಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ ಅವರಿಂದ ಡಿಜಿ ಪ್ರಶಂಸನೀಯ ಪದಕ ಪಡೆದು ಗೌರವಿಸಲ್ಪಟ್ಟಿದ್ದಾರೆ.

ಬೆಂಗಳೂರು ಕೋರಮಂಗಲದ ಕೆಎಸ್‌ಆರ್‌ಪಿ (KSRP) ಮೈದಾನದಲ್ಲಿ ಇಂದು ನಡೆದ ಗೌರವ ಸಮಾರಂಭದಲ್ಲಿ ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಅವರು ಬಿ. ವಿಜಯ ಕುಮಾರ್ ಅವರಿಗೆ ಪ್ರಶಂಸನೀಯ ಪದಕ ಪ್ರದಾನ ಮಾಡಿ ಅಭಿನಂದಿಸಿದರು.

ಬಿ. ವಿಜಯ ಕುಮಾರ್ ಅವರು ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸಾಧನೆಗೆ ಉಡುಪಿ ಜಿಲ್ಲೆಯ ಪೊಲೀಸ್ ಸಿಬ್ಬಂದಿ, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!