ರಕ್ತಸಂಗ್ರಹ ಘಟಕ ಸಂಪೂರ್ಣ ಕಾನೂನುಬದ್ಧ- ರೋಗಿಗಳ ಸುರಕ್ಷತೆಗೆ ಆದ್ಯತೆ: ಉಡುಪಿ ಆದರ್ಶ ಆಸ್ಪತ್ರೆಯ ಸ್ಪಷ್ಟನೆ
ಉಡುಪಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆದರ್ಶ ಆಸ್ಪತ್ರೆಯ ರಕ್ತಸಂಗ್ರಹ ವ್ಯವಸ್ಥೆಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ತಪ್ಪು ಮಾಹಿತಿಗಳು ಹಾಗೂ ಊಹಾಪೋಹಗಳ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.
ಆದರ್ಶ ಆಸ್ಪತ್ರೆಯಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಸಂಬಂಧಿತ ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ಹಾಗೂ ತುರ್ತು ಅಪಘಾತ ಚಿಕಿತ್ಸೆ ಸೇರಿದಂತೆ ಹಲವು ಪ್ರಮುಖ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಿಭಾಗಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹೆಚ್ಚಿನ ಪ್ರಮಾಣದ ರಕ್ತದ ಅಗತ್ಯವಿರುತ್ತದೆ. ಈ ಕಾರಣದಿಂದಲೇ ಆಸ್ಪತ್ರೆಯಲ್ಲಿ ರಕ್ತಸಂಗ್ರಹ ಕೇಂದ್ರವನ್ನು ಸ್ಥಾಪಿಸಿ, ಅಗತ್ಯವಿರುವ ರಕ್ತವನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಆದರ್ಶ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ರಕ್ತಸಂಗ್ರಹ ಘಟಕ (Blood Storage Centre) ಆಗಿದ್ದು, ಇದನ್ನು ನಡೆಸಲು ಸಂಬಂಧಿತ ಅಧಿಕಾರಿಗಳಿಂದ ಅಗತ್ಯವಾದ ಅಧಿಕೃತ ಅನುಮತಿ ಹಾಗೂ ಪರವಾನಗಿ ಪಡೆಯಲಾಗಿದೆ. ಆಸ್ಪತ್ರೆಯು ಕೇಂದ್ರ ಮತ್ತು ರಾಜ್ಯಸರ್ಕಾರದ ನಿಯಮಾವಳಿಗಳು, ಆರೋಗ್ಯ ಇಲಾಖೆಯ ಮಾರ್ಗಸೂಚಿಗಳು ಹಾಗೂ ಸಂಬಂಧಿತ ಕಾನೂನುಗಳ ಅನುಸಾರವೇ ತನ್ನ ಸೇವೆಗಳನ್ನು ನೀಡುತ್ತಿದೆ.
ಆಸ್ಪತ್ರೆಯಲ್ಲಿ ಯಾವುದೇ ರೀತಿಯ ರಕ್ತ ಸಂಗ್ರಹಣೆ, ವಿತರಣೆ ಅಥವಾ ರೋಗಿಗಳಿಗೆ ರಕ್ತ ಒದಗಿಸುವ ಪ್ರಕ್ರಿಯೆಗಳು ಕಾನೂನುಬಾಹಿರವಾಗಿ ನಡೆಯುತ್ತಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಆಸ್ಪತ್ರೆಯಲ್ಲಿ ರಕ್ತವನ್ನು ಸಂಗ್ರಹಿಸಿ ರೋಗಿಗಳಿಗೆ ನೀಡುವ ಪ್ರತಿಯೊಂದು ಹಂತದಲ್ಲಿಯೂ ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.ಆದರ್ಶ ಆಸ್ಪತ್ರೆಯ ರಕ್ತಸಂಗ್ರಹ ಘಟಕವು ಸರ್ಕಾರದ ಮಾನ್ಯತೆ ಪಡೆದ ಸಹಭಾಗಿ ಸರ್ಕಾರಿ ರಕ್ತನಿಧಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ರೋಗಿಗಳಿಗೆ ಅಗತ್ಯವಿರುವ ರಕ್ತವನ್ನು ನಿಯಮಾನುಸಾರ ಸರ್ಕಾರಿ ರಕ್ತನಿಧಿಯಿಂದ ಪಡೆಯಲಾಗುತ್ತದೆ. ಬಳಿಕ ಆಸ್ಪತ್ರೆಯ ರಕ್ತಸಂಗ್ರಹ ಘಟಕದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು, ಗುಣಮಟ್ಟದ ಪರಿಶೀಲನೆ ಮತ್ತು ದಾಖಲಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಮಾತ್ರ ವೈದ್ಯರ ಸಲಹೆ ಹಾಗೂ ಚಿಕಿತ್ಸಾ ಅಗತ್ಯಕ್ಕೆ ಅನುಗುಣವಾಗಿ ರೋಗಿಗಳಿಗೆ ರಕ್ತವನ್ನು ನೀಡಲಾಗುತ್ತದೆ.
ರಕ್ತದ ಪ್ರತಿಯೊಂದು ಘಟಕವೂ ಸಂಪೂರ್ಣ ದಾಖಲೆಗಳೊಂ ದಿಗೆ ಸ್ವೀಕರಿಸಲ್ಪಡುತ್ತದೆ ಹಾಗೂ ಅದರ ಸಂಗ್ರಹಣೆ, ತಾಪಮಾನ ನಿಯಂತ್ರಣ, ಸುರಕ್ಷಿತ ನಿರ್ವಹಣೆ ಮತ್ತು ವಿತರಣೆಗೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇದರಿಂದ ರೋಗಿಗಳ ಸುರಕ್ಷತೆ ಹಾಗೂ ಚಿಕಿತ್ಸೆಯ ಗುಣಮಟ್ಟಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಯಲ್ಲಿ ನಡೆಯುತ್ತಿರುವ ಎಲ್ಲಾ ಪ್ರಕ್ರಿಯೆಗಳು ಸಂಬಂಧಿತ ಅಧಿಕಾರಿಗಳ ಪರಿಶೀಲನೆಗೆ ಒಳಪಟ್ಟಿದ್ದು, ಅವು ಸಂಪೂರ್ಣ ಪಾರದರ್ಶಕ ಹಾಗೂ ಕಾನೂನುಬದ್ಧವಾಗಿವೆ. ಆಸ್ಪತ್ರೆಯು ಯಾವುದೇ ರೀತಿಯ ಅಕ್ರಮ ರಕ್ತದ ವ್ಯಾಪಾರದ (ಬ್ಲಡ್ ದoಧೆ) ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಆಡಳಿತ ಮಂಡಳಿ ಪುನರುಚ್ಚರಿಸಿದೆ.
ಸಮಾಜದಲ್ಲಿ ಹರಿದಾಡುತ್ತಿರುವ ಆಧಾರರಹಿತ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡದೆ, ಆಸ್ಪತ್ರೆಯಿಂದ ಅಧಿಕೃತವಾಗಿ ನೀಡಲಾಗುವ ಮಾಹಿತಿಯನ್ನೇ ನಂಬುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ. ರೋಗಿಗಳ ಜೀವ ರಕ್ಷಣೆ, ಸುರಕ್ಷಿತ ರಕ್ತ ಲಭ್ಯತೆ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಆದರ್ಶ ಆಸ್ಪತ್ರೆಯ ಪ್ರಮುಖ ಧ್ಯೇಯವಾಗಿದ್ದು, ಮುಂದೆಯೂ ಇದೇ ಬದ್ಧತೆಯೊಂದಿಗೆ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಜಿಲ್ಲಾ ಆಸ್ಪತ್ರೆ ಉಡುಪಿ ರಕ್ತ ನಿಧಿ ಕೇಂದ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಸುಳ್ಳು ಸುದ್ದಿಗಳು ಆಧಾರರಹಿತವಾಗಿದ್ದು- ಉಡುಪಿ ಜಿಲ್ಲಾ ಸರ್ಜನ್ ಡಾ.ಎಚ್. ಅಶೋಕ್ ಸ್ಪಷ್ಟನೆ
ಜು.07ರಂದು ಜಿಲ್ಲಾ ಆಸ್ಪತ್ರೆ ಉಡುಪಿ ರಕ್ತ ನಿಧಿ ಕೇಂದ್ರದ ಕುರಿತು ರಕ್ತವನ್ನು ಯಾವುದೆ ದಾಖಲಾತಿ ಅಥವಾ ರಶೀದಿ ಇಲ್ಲದೆ ವಿತರಿಸಲಾಗುತ್ತಿದೆ. ಒಂದೇ ಬಾರಿ 15ಯುನೀಟ್ ರಕ್ತವನ್ನ ಖಾಸಗಿ ಆಸ್ಪತ್ರಗೆ ನೀಡಲಾಗಿದೆ ಆದರೆ ಈ ಮೆಲ್ಕಂಡ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳು ಆರೋಪವಾಗಿರುತ್ತದೆ.
ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರದಿಂದ ರಕ್ತ ಹಾಗೂ ರಕ್ತ ಘಟಕಗಳ ವಿತರಣೆಯನ್ನು ಕರ್ನಾಟಕ ಸರ್ಕಾರದ ಜಾರಿಯಲ್ಲಿರುವ ಮಾರ್ಗಸೂಚಿಗಳು.Drugs cosmetics act 1940 and ಸಂಬಂಧಿತ ನಿಯಮಗಳು ಹಾಗೂ ರಕ್ತ ಕೇಂದ್ರದ (Standard operating procedures) ಅನುಸಾರ ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತದೆ. ಪ್ರತಿ ಯೂನಿಟ್ ರಕ್ತ ಅಥವಾ ರಕ್ತ. ಘಟಕವನ್ನು ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ. ನಿಗದಿತ ನೋಂದಣಿಗಳನ್ನು ಪೂರ್ಣಗೊಳಿಸಿದ ನಂತರವೇ ವಿತರಿಸಲಾಗುತ್ತದೆ. ಯಾವುದೇ ರಕ್ತ ಅಥವಾ ರಕ್ತ ಘಟಕವನ್ನು ದಾಖಲಾತಿಗಳಿಲ್ಲದೆ ವಿತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಮತ್ತು ಅದರ ಪ್ರಕಾರವೇ ಬ್ಲಡ್ ಸೋಟರಜ್ ಯುನಿಟ್ ನಿರ್ವಹಿಸುತ್ತಿರುವ ಅದರ್ಶ ಆಸ್ಪತ್ರೆಗೆ ಸರಕಾರದ ಮಾರ್ಗಸೂಚಿ ಗಳ ಅನ್ವಯ ಬ್ಲಡ್ ನ್ನು ವಿತರಿಸುಲಾಗಿರುತ್ತದೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳಾಗಿದ್ದು ಈ ಸಂಬಂದ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರ ಬಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದೆ.





