ಸುನೀಲ್ ಕುಮಾರ್ ನೇತೃತ್ವದಲ್ಲಿ ವಿಕಾಸ ಉದ್ಯೋಗ ಸೇತು: 600 ಕ್ಕೂ ಅಧಿಕ ಉದ್ಯೋಗಾರ್ಥಿಗಳ ಉದ್ಯೋಗದ ಕನಸು ನನಸು

ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ರಾಷ್ಟ್ರದಲ್ಲೇ ಅರ್ಥಪೂರ್ಣವಾಗಿ ಆಚರಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್

ಕಾರ್ಕಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸ್ಥಾಪನಾ ದಿನವನ್ನು ಮಾಜಿ ಸಚಿವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನೀಲ್ ಕುಮಾರ್ ರವರ ನೇತೃತ್ವದಲ್ಲಿ ವಿಕಾಸ ಸೇವಾ ಸಂಸ್ಥೆಯು ವಿಕಾಸ ಉದ್ಯೋಗ ಸೇತು ಎಂಬ ಬೃಹತ್ ಉದ್ಯೋಗ ಸಂದರ್ಶನ ಗುರುವಾರದಂದು ಕಾರ್ಕಳದ ವಿಕಾಸ ಕಛೇರಿಯಲ್ಲಿ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದೆ. 

ಬೆಂಗಳೂರು, ಮಂಗಳೂರು ಉಡುಪಿ ಸೇರಿದಂತೆ ವಿವಿಧ ಭಾಗಗಳಿಂದ ಆಯ್ದ 25 ಕಂಪನಿಗಳಿಂದ ನೇರ ಸಂದರ್ಶನವನ್ನು ಆಯೋಜಿಸಲಾಗಿತ್ತು. 

1600ಕ್ಕೂ ಅಧಿಕ ಉದ್ಯೋಗಾರ್ಥಿಗಳು ಭಾಗಿಯಾಗಿದ್ದು, 360 ಕ್ಕೂ ಹೆಚ್ಚಿನ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಲಭಿಸಿದ್ದು, ಅವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಯಿತು. ಇನ್ನುಳಿದಂತೆ 240 ಕ್ಕೂ ಅಧಿಕ ಉದ್ಯೋಗಾರ್ಥಿಗಳನ್ನು ಶಾರ್ಟ್ ಲೀಸ್ಟ್ ಮಾಡಲಾಗಿದೆ. ಎರಡನೇ ಹಂತದಲ್ಲಿ ಮತ್ತೆ ಕಂಪೆನಿ ಅವರನ್ನು ಕಂಪನಿಗೆ ಕರೆಸಿ ಸಂದರ್ಶನ ನಡೆಸಲಿದೆ.

ವಿಕಾಸ ಶಾಸಕರ ಕಛೇರಿ ಹಾಗೂ ರಾಮಮಂದಿರ ಎರಡೂ ಕಡೆಗಳಲ್ಲಿ ಏಕ ಕಾಲಕ್ಕೆ ಬೆಳಗ್ಗೆ 9.00 ರಿಂದ ಸಂಜೆ 5.30ರ ವರೆಗೆ ಸಂದರ್ಶನಗಳು ನಡೆದಿದ್ದು, ಉದ್ಯೋಗಾರ್ಥಿಗಳಿಗೆ ಸುವ್ಯವಸ್ಥಿತ ಸಭಾಂಗಣ, ಆಸನ, ಊಟ, ಚಾ – ತಿಂಡಿ ಸಹಿತ ಎಲ್ಲಾ ತರಹದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮೊದಲೇ ನೋಂದಾವಣೆ ಮಾಡಿಕೊಂಡ ಉದ್ಯೋಗಾರ್ಥಿಗಳಿಗೆ ಸೂಕ್ತ ಮಾಹಿತಿ ಜೊತೆಗೆ ಎರಡು ದಿನಗಳ ಕಾಲ ಸಂದರ್ಶನ ಎದುರಿಸಲು ತರಬೇತಿಯನ್ನು ನೀಡಲಾಗಿತ್ತು. 

ಈ ವಿಕಾಸ ಉದ್ಯೋಗ ಸೇತುವಿನಿಂದ ನನ್ನ ಮೊದಲ ಉದ್ಯೋಗ ಪಡೆದುಕೊಂಡ ಸಂತೋಷ ನನ್ನದು, ಇಂತಹ ಉದ್ಯೋಗ ಮೇಳ ಹಮ್ಮಿಕೊಂಡು ನನ್ನ ಬದುಕಿಗೆ ಹೊಸ ದಿಕ್ಕು ನೀಡಿದ ವಿಕಾಸ ಸೇವಾ ಸಂಸ್ಥೆಗೂ ನಮ್ಮ ಶಾಸಕ ಸುನೀಲ್ ಕುಮಾರ್ ಅವರಿಗೂ ನನ್ನ ಧನ್ಯವಾದಗಳು- ಸುಪ್ರೀಯಾ  FOXCON COMPANY ಗೆ ಆಯ್ಕೆಯಾದ ಉದ್ಯೋಗಾರ್ಥಿ

“ಕಂಪನಿಗಳೇ ನಮ್ಮ ಊರಿಗೆ ಬಂದು ನಮಗೆ ಉದ್ಯೋಗ ಕಲ್ಪಿಸಿ ಕೊಡುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಭವಿಷ್ಯ ಕಟ್ಟಿಕೊಡುವ ಕೆಲಸ ಈ ಉದ್ಯೋಗ ಮೇಳ. ನನಗೆ ಕೆಲಸ ಸಿಕ್ಕಿದ್ದು, ನಮ್ಮ ಇಡೀ ಕುಟುಂಬಕ್ಕೆ ಹೊಸ ಬರವಸೆ ಬಂದಿದೆ.”- ಶ್ರೀಕಾಂತ್ TOYOTA ಸಂಸ್ಥೆಗೆ ಆಯ್ಕೆಯಾದ ಉದ್ಯೋಗಾರ್ಥಿ

“ಉದ್ಯೋಗ ಮೇಳದಂತಹ ಸಮಾಜಮುಖಿ ಕೆಲಸ ಶಾಸಕ ಸುನೀಲ್ ಕುಮಾರ್  ಅವರಿಂದ ನಡಿತ ಇದೇ. ಯುವ ಜನತೆ ಯನ್ನು ಪ್ರೋತ್ಸಾಹಿಸುವ ಅವರ ಈ ಮಹತ್ಕಾರ್ಯ ನಿಜಕ್ಕೂ ಶ್ಲಾಘನೀಯ.‌ ಒಬ್ಬರು ಶಾಸಕರು ಇಷ್ಟು ಮುತುವರ್ಜಿಯಿಂದ ಕಾರ್ಯಕ್ರಮ ಮಾಡುತ್ತಿರುವುದು ಬಹುಶಃ ಇದು ರಾಜ್ಯದಲ್ಲೇ ಮೊದಲು.  ಶಾಸಕರ ಕಾರ್ಯ ವೈಖರಿಯ ಬಗ್ಗೆ ಬಹಳ ಖುಷಿ ಇದೆ- ವಿವೇಕ್ ಆಳ್ವ ಆಳ್ವಾಸ್ ಶಿಕ್ಷಣ ಸಂಸ್ಥೆಗಳು

1 thought on “ಸುನೀಲ್ ಕುಮಾರ್ ನೇತೃತ್ವದಲ್ಲಿ ವಿಕಾಸ ಉದ್ಯೋಗ ಸೇತು: 600 ಕ್ಕೂ ಅಧಿಕ ಉದ್ಯೋಗಾರ್ಥಿಗಳ ಉದ್ಯೋಗದ ಕನಸು ನನಸು

  1. Very good opportunity to UnEmployed Educated People.Welldone Mr Sunil Kumar MLA Karkala and Ex Minister Karnataka.Very Proud of This Work.

Leave a Reply

Your email address will not be published. Required fields are marked *

error: Content is protected !!