ಮಣಿಪಾಲ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷರಾಗಿ ಗಣೇಶ್ ಪ್ರಭು ಪುನರಾಯ್ಕೆ
ಮಣಿಪಾಲ: ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಮಣಿಪಾಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಈಶ್ವರನಗರದ ವೈಷ್ಣವಿ ಸಭಾಭವನದಲ್ಲಿ ಜೂ.17ರಂದು ನಡೆಯಿತು.
ಸಂಘದ ಗೌರವಾಧ್ಯಕ್ಷರಾದ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ, ಅಧ್ಯಕ್ಷರಾಗಿ ಗಣೇಶ್ ಪ್ರಭು ಅವರನ್ನು ಮರುಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಿಯಾಜ್ 3ನೇ ಬಾರಿಗೆ ಆಯ್ಕೆ ಮಾಡಲಾಯಿತು. ಇತರ ಪದಾಧಿಕಾರಿಗಳಾಗಿ ಗೋಪಾಲಕೃಷ್ಣ ಕಾಮತ್ (ಉಪಾಧ್ಯಕ್ಷ), ಲೋಕೇಶ್ ಪೂಜಾರಿ (ಕೋಶಾಧಿಕಾರಿ), ಸುಕೇಶ್ ನಾಯ್ಕ್ (ಜಂಟಿ ಕಾರ್ಯದರ್ಶಿ), ಗುರುದತ್ ಮಲ್ಯ (ಕ್ರೀಡಾ ಕಾರ್ಯದರ್ಶಿ) ಹಾಗೂ ಸಂದೀಪ್ ಕುಂದರ್ (ಸಂಘಟನಾ ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಿ, ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಶುಭ ಹಾರೈಸಲಾಯಿತು.





