ಹೊಸ ವರ್ಷಾಚರಣೆ ಮಾರ್ಗಸೂಚಿ ಪ್ರಕಟ: ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಖಂಡಿತ..!

ಬೆಂಗಳೂರು: ದೇಶಾದ್ಯಂತ ಕೊರೋನಾ ಆತಂಕದ ನಡುವೆಯೇ ಸಾಲು ಸಾಲು ಹಬ್ಬಗಳು, ಅನೇಕ ಸಂಭ್ರಮಗಳು ನಡೆದೇ ಹೋಯ್ತು. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರುಷವು ಆಗಮಿಸಲಿದೆ. ಆದರೆ ಈ ಭಾರಿಯ ಹೊಸ ವರ್ಷದ ಆರಂಭ ಪ್ರತೀ ವರ್ಷದಂತೆ ಸಂಭ್ರಮದಿಂದ ಕೂಡಿರುವುದು ಕೊಂಚ ಅನುಮಾನವೆ ಯಾಕೆಂದರೆ ಕೋವಿಡ್ – 19 ಹಿನ್ನೆಲೆ ರಾಜ್ಯದಲ್ಲಿ ಈ ಬಾರಿಯ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಪ್ರತ್ಯೇಕ ಮಾರ್ಗಸೂಚಿಗಳನ್ನ ಸಿದ್ಧಪಡಿಸಿದೆ. ಅದರ ಜೊತೆಗೆ ಈ  ನಿಯಮಗಳನ್ನು ಉಲ್ಲಂಘಿಸಿದರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ಮತ್ತು ವಿಪತ್ತು ನಿರ್ವಹಣೆ ಕಾಯ್ದೆ ೨೦೦೫ರ ಅನ್ವಯ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದೆ.

ಮಾರ್ಗಸೂಚಿಯಂತೆ, ಹೊಸ ವರ್ಷದ ಸಂಭ್ರಮಾಚರಣೆಗೆ ಸಣ್ಣ ಮಟ್ಟಿನ ಕಾರ್ಯಕ್ರಮಗಳನ್ನ ಆಯೋಜನೆ ಮಾಡಬಹುದಾಗಿದ್ದರೂ ಕೂಡಾ, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನ ಆಯೋಜಿಸುವಂತಿಲ್ಲ. ಇನ್ನು ಸಣ್ಣ ಮಟ್ಟಿನ ಕಾರ್ಯಕ್ರಮಗಳ ಆಚರಣೆಗೂ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಪಾಸ್ ಪಡೆಯುವುದು ಕಡ್ಡಾಯವಾಗಿದೆ. ಈ ಆಚರಣೆಯಲ್ಲಿ200 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಆರೋಗ್ಯ ಸೇತು ಆಯಪ್ ಕಡ್ಡಾಯವಾಗಿದ್ದು, ಕೊರೊನಾ ನಿಯಮಗಳನ್ನ ಅಚ್ಚುಕಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ.

Leave a Reply

Your email address will not be published. Required fields are marked *

error: Content is protected !!