ಜೈ ಹನುಮಾನ್ ಸೇವಾ ಬಳಗ ಉಡುಪಿ: ಪುಸ್ತಕ ವಿತರಣೆ
ಉಡುಪಿ: ಜೈ ಹನುಮಾನ್ ಸೇವಾ ಬಳಗ ಉಡುಪಿ ಇದರ ನಾಲ್ಕನೇ ಯೋಜನೆಯ ಪ್ರಯುಕ್ತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಬಾರಿ ಸರಕಾರಿ ಪ್ರೌಢಶಾಲೆ ಪರ್ಕಳದ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪ್ರಾಣೇಶ್ ಪರ್ಕಳ ವಹಿಸಿದ್ದರು. ಈ ಸಂದರ್ಭದಲ್ಲಿ ರಾಮಾಂಜನೇಯ ಸೇವಾ ಸಮಿತಿ ಸದಸ್ಯರು, ಶ್ರೀ ರಾಮ್ ಫ್ರೆಂಡ್ಸ್ ಕೊಡಂಗಳದ ಸದಸ್ಯರು ಮತ್ತು ಜೈ ಹನುಮಾನ್ ಸೇವಾ ಬಳಗ ಉಡುಪಿ ಇದರ ಸದಸ್ಯರ ಸಹಯೋಗದಲ್ಲಿ ನಡೆಯಿತು.ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.





