ಶಾಲಾ ಕಾಲೇಜ್‌ನಲ್ಲಿ ಹಿಜಾಬ್ ನಿರ್ಬಂಧ ಆದೇಶ ಹಿಂಪಡೆದ ಸಿದ್ದರಾಮಯ್ಯ ಸರಕಾರ!

ಬೆಂಗಳೂರು: 2022 ರಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಹೊರಡಿಸಿದ್ದ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವ ಕುರಿತ ಆದೇಶವನ್ನು ಬುಧವಾರ ಸಿದ್ದರಾಮಯ್ಯ ಸರಕಾರ ಹಿಂಪಡೆದಿದೆ.

ಬಿಜೆಪಿ ಸರಕಾರ ಹೊರಡಿಸಿದ್ದ ಆದೇಶದ ಮೂಲಕ ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸಲಾಗಿತ್ತು. ಇದೀಗ ಈ ಅದೇಶವನ್ನು ರಾಜ್ಯ ಸರಕಾರ ವಾಪಸ್‌ ಪಡೆದಿದೆ.

ಸಮವಸ್ತ್ರ ಮತ್ತು ಶಿಸ್ತನ್ನು ಕಾಪಾಡುವ ಜೊತೆಗೆ, ತಾರತಮ್ಯವಿಲ್ಲದ ಮತ್ತು ಸಾಂವಿಧಾನಿಕವಾಗಿ ಸಮತೋಲಿತವಾದ ರೀತಿಯಲ್ಲಿ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸಲು ಅನುಮತಿಸುವ ಉದ್ದೇಶದಿಂದ 2022 ರ ಆದೇಶವನ್ನು ಹಿಂಪಡೆದು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹೊಸ ನಿರ್ದೇಶನಗಳನ್ನು ನೀಡುವುದು ಅಗತ್ಯವೆಂದು ಸರ್ಕಾರವು ತೀರ್ಮಾನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!