ಸಾಬ್ರಕಟ್ಟೆ: ಪ್ರಸಾದ್ ನೇತ್ರಾಲಯ ಉಚಿತ ಕನ್ನಡಕ ವಿತರಣೆ
ಉಡುಪಿ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ಹಾಗೂ ವಿವಿಧ ಇತರ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಸಾಬ್ರಕಟ್ಟೆಯಲ್ಲಿ ನಡೆದ ‘ನೇತ್ರ ಉಚಿತ ತಪಾಸಣೆ, ಶಸ್ತçಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರ’ದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಹಾಗೂ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ಇದರ ಮಂಗಳೂರು ಮತ್ತು ಉಡುಪಿ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಕನ್ನಡಕ ವಿತರಿಸಿದರು.
ನೇತ್ರ ತಜ್ಞ ಹಾಗೂ NMO ರಾಜ್ಯ ಕಾರ್ಯದರ್ಶಿ ಡಾ. ಶ್ರೀಕಾಂತ ಶೆಟ್ಟಿ, ಸಾಲಿಗ್ರಾಮ ತಾಲೂಕು ಸಂಘಚಾಲಕ ಸಂದೀಪ್ ಶೆಟ್ಟಿ, ಉದ್ಯಮಿಗಳಾದ ಅಮರನಾಥ ಭಂಡಾರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಬ್ರಕಟ್ಟೆ ಇದರ SDMCಅಧ್ಯಕ್ಷ ಶರತ್ ಉಪಸ್ಥಿತರಿದ್ದರು. ಕರುಣಾಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





