ಅಸೋಸಿಯೇಶನ್ಸ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಶನಲ್ ಉಡುಪಿ ಜಿಲ್ಲಾ ಸಂಪುಟ ಪದ ಪ್ರದಾನ

ಉಡುಪಿ, ಎ.26:ಆಸೋಸಿಯೇಶನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಶನಲ್‌ನ 2026-27ನೇ ಸಾಲಿನ ಜಿಲ್ಲಾ ಸಂಪುಟ ಪದ ಪ್ರದಾನ ಕಾರ್ಯಕ್ರಮ ‘ಹೇಮಾಂಕಿತ’ ಅಮೃತ್ ಗಾರ್ಡನ್‌ನಲ್ಲಿ ಶನಿವಾರ ನಡೆಯಿತು.

ಪದಪ್ರದಾನ ಅಧಿಕಾರಿ ಅಂತಾರಾಷ್ಟ್ರೀಯ ಅಧ್ಯಕ್ಷ ಡಾ| ಬಾಲ ಜಿ. ಶಾಸ್ತ್ರಿ ಪದ ಪ್ರದಾನ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಸಂಘ ಸಂಸ್ಥೆಗಳಲ್ಲಿ ನಾವು ಮಾಡುವ ಸೇವೆ ಮತ್ತು ಸಮಾಜಮುಖಿ ಕಾರ್ಯಗಳು ಮಾನವನ ಜೀವನಕ್ಕೆ ಆಳವಾದ ಅರ್ಥ ನೀಡುತ್ತವೆ. ಪ್ರಸ್ತುತ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ಅವರ ನಾಯಕತ್ವದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳು ನಡೆದು ಸಂಸ್ಥೆಯ ಹೆಸರು ಇನ್ನಷ್ಟು ಬೆಳಗಲಿ ಎಂದರು.

ನಿಟ್ಟೆ ವಿ.ವಿ.ಕುಲಪತಿ ಡಾ|ಎಂ.ಎಸ್ ಮೂಡಿತ್ತಾಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಡಾ. ನಾಗರಾಜ್ ಬಾಯರಿ ಮಾತನಾಡಿ, ಜೀವನದಲ್ಲಿ ನಿಜವಾದ ನೆಮ್ಮದಿ ಬೇಕಾದರೆ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ನಮ್ಮ ಬದುಕಿನ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದು, 350 ಸದಸ್ಯರನ್ನೊಳಗೊಂಡ ಸಂಸ್ಥೆಗೆ ಮುಂದಿನ ಮಾರ್ಚ್ ಅಂತ್ಯದೊಳಗೆ ಸಾವಿರ ಸದಸ್ಯರನ್ನು ಸೇರಿಸಲಾಗುವುದು. “‘ಪ್ರೇರಕ” ಎನ್ನುವ ಜಿಲ್ಲಾ ಯೋಜನ ಕಾರ್ಯಕ್ರಮಗಳ ಮೂಲಕ ಹಲವು ಜನೋಪಯೋಗಿ ಕಾರ್ಯಗಳನ್ನು ಮಾಡುವ ಯೋಜನೆ ಇದೆ ಎಂದರು. ಪ್ರಥಮ ಉಪ ಜಿಲ್ಲಾ ಗವರ್ನರ್ ಸುಧಾಕರ್ ಹೆಗ್ಡೆ,ದ್ವಿತೀಯ ಉಪ ಜಿಲ್ಲಾ ಗವರ್ನರ್ ಡಾ.ಅಶೋಕ್ ಕುಮಾರ್ ವೈ.ಜಿ., ಮಾಜಿ ಜಿಲ್ಲಾ ಗವರ್ನರ್ ಸುನಿಲ್ ಸಾಲ್ಯಾನ್ ಕಡೆಕಾರ್ ಅವರನ್ನು ಅಭಿನಂದಿಸಲಾಯಿತು.

ಹೇಮಲತಾ ಸುನಿಲ್ ಶೆಟ್ಟಿ ಸಮಾರಂಭವನ್ನು ದೀಪ ಪ್ರಜ್ವಲಿಸಿದರು. ಅಂತಾರಾಷ್ಟ್ರೀಯ ನಿರ್ದೇಶಕ ಡಿ.ಶ್ರೀಧರ ಶೇಣವ,ಮುನಿಯಪ್ಪ ಕೆ. ಎಂ,ಸಮ್ಮೇಳನ ಸಮಿತಿ ಕೋಶಾಧಿಕಾರಿ ಕೆ.ಜಯರಾಮ ಆಚಾರ್ಯ, ಜಿಲ್ಲಾಸಂಪುಟ ಕಾರ್ಯದರ್ಶಿ ಕೆ ರಾಮಚಂದ್ರ ಭಟ್,ಕೋಶಾಧಿಕಾರಿ ಎಂ. ಕೃಷ್ಣ ಆಳ್ವ, ಪ್ರಾದೇಶಿಕ 1ರ ಅಧ್ಯಕ್ಷ ಮೋಹನ್ ಎಂ.ಪಿ, ಜಿಲ್ಲಾ ರಾಯಭಾರಿ ಗೋಪಾಲ ಸಿ.ಬಂಗೇರ, ಸುದರ್ಶನ ಹೆಗ್ಡೆ, ಸಂತೋಷ ಕುಮಾರ್ ಬೈಲೂರು,ಜಯಾನಂದ ಕೊಡವೂರು,ರಮೇಶ್ ಶೆಟ್ಟಿ ಕೆ., ಡಾ.ಗಾಯತ್ರಿ ಸಂತೋಷ, ಗಿರಿಜಾ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ,ಸಮ್ಮೇಳನ ಸಮಿತಿ ಕಾರ್ಯದರ್ಶಿ ಕೇಶವ ಅಮೀನ್ ವಂದಿಸಿದರು. ಪಿಆರ್‌ಒ ಡಾ.ಜಗದೀಶ್ ಹೊಳ್ಳ ನಿರೂಪಿಸಿ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಅತಿಥಿಗಳನ್ನು ಪರಿಚಯಿಸಿದರು.

Leave a Reply

Your email address will not be published. Required fields are marked *

error: Content is protected !!