ಗ್ರಾ.ಪಂ.ಚುನಾವಣೆಯನ್ನು ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದ ಮುಕ್ತಗೊಳಿಸಿ: ಆಯೋಗ ಕಟ್ಟಾಜ್ಞೆ

ಬೆಂಗಳೂರು: ರಾಜ್ಯದಲ್ಲಿ ಇದೇ 22 ಮತ್ತು 27 ರಂದು ಎರಡು ಹಂತಗಳಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಹೆಚ್ಚಾಗುತ್ತಿರುವುದನ್ನು ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಸತ್ ಸಂಪ್ರದಾಯಗಳನ್ನು ಗಾಳಿಗೆ ತೂರಿ ಪಕ್ಷದ ನೆಲೆಯಲ್ಲಿ ಸಭೆ, ಸಮಾರಂಭಗಳನ್ನು ನಡೆಸಿ ಗ್ರಾಮ ಪಂಚಾಯತ್ ಚುನಾವಣೆಯನ್ನು ರಾಜಕೀಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಆಯೋಗ ಗರಂ ಆಗಿದೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು, ರಾಜಕೀಯದಿಂದ ಪಂಚಾಯತ್ ಗಳನ್ನು ಮುಕ್ತಗೊಳಿಸಬೇಕು. ಇಂತಹ ಕಲುಷಿತ ವಾತಾವರಣವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಂತೆ ರಾಜ್ಯ ಚುನಾವಣಾ ಆಯೋಗ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.

1 thought on “ಗ್ರಾ.ಪಂ.ಚುನಾವಣೆಯನ್ನು ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದ ಮುಕ್ತಗೊಳಿಸಿ: ಆಯೋಗ ಕಟ್ಟಾಜ್ಞೆ

  1. ಪಕ್ಷದ ಚಿನ್ಹೆ ಬಳಸಿ ಗೆಲುವು ಸಾಧಿಸಿದ ತಾಲ್ಲೂಕು ಪಂಚಾಯತ.
    ಜಿಲ್ಲಾ ಪಂಚಾಯತ. ಶಾಸಕರು. ಸಂಸದರು ಮತ್ತು ಪರಿಷತ್ತು ಸದಸ್ಯರು ಚುನಾವಣಾ ಪ್ರಚಾರಕ್ಕೆ ಯಾವ ವಾರ್ಡ್ ಗಳಿಗೂ ಸಂಚಾರ ಮಾಡಬಾರದು ಅಂತ ಆಯೋಗ ಯಾಕರ ಹೇಳಿಕೆ ನೀಡೊಲ್ಲಾ?

Leave a Reply

Your email address will not be published. Required fields are marked *

error: Content is protected !!