ಭಾರತ ಅಖಂಡವಾಗಿ ಉಳಿದಿರುವುದೇ ಅಂಬೇಡ್ಕರ್ ಅವರಿಂದ: ಶ್ಯಾಮರಾಜ್ ಬಿರ್ತಿ

ಉಡುಪಿ: ಈ ನಮ್ಮ ದೇಶಕ್ಕೆ ಬಾಬಾಸಾಹೇಬರು ಕೊಟ್ಟ ಸಂವಿಧಾನದಿಂದಾಗಿ ಇಂದಿಗೂ ಭಾರತ ಅಖಂಡವಾಗಿ ಉಳಿದಿದೆ. ನೂರಾರು ಬಾಷೆ, ನೂರಾರು ಜಾತಿ, ನೂರಾರು ಸಂಸ್ಕೃತಿ, ನೂರಾರು ಆಹಾರ ಪಧ್ಧತಿ, ನೂರಾರು ಪ್ರಾಕ್ರತಿಕ ವೈವಿಧ್ಯತೆಯ ಪ್ರದೇಶ ಇಷ್ಟೆಲ್ಲಾ ವೈವಿಧ್ಯತೆಗಳಿದ್ದರೂ ಅರುಣಾಚಲ ಪ್ರದೇಶದಿಂದ ಗುಜರಾತ್‌ವರೆಗೆ, ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತವು ಒಂದೇ ರಾಷ್ಟ್ರವಾಗಿ ಉಳಿದಿದೇ ಎಂದಾದರೆ ಅದಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ. ಒಂದು ವೇಳೆ ಈ ಸಂವಿಧಾನವನ್ನು ಬದಲಾಯಿಸಿದ್ದೇ ಆದರೆ ಭಾರತ ಇನ್ನೊಂದು ಸೋವಿಯತ್ ಯೂನಿಯನ್ ಆಗಬಹುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಹೇಳಿದರು.

ಅವರು ಆರೂರಿನಲ್ಲಿ ಆಚರಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಬ್ರಹ್ಮಾವರ ತಾಲೂಕು ಮಟ್ಟದ ಬಾಬಾಸಾಹೇಬ್ ಅಂಬೇಡ್ಕರ್ ರವರ 135 ನೇ ಜನ್ಮದಿನಾಚರಣೆ ಯನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ಒಂದು ವೇಳೆ ಅಂಬೇಡ್ಕರ್ ರವರು ಈ ದೇಶದಲ್ಲಿ ಜನಿಸದೇ ಇರುತ್ತಿದ್ದರೇ ದಲಿತರು ಇಂದಿಗೂ ಹಂದಿ, ನಾಯಿಗಳಿಗಿಂತ ಕಡೆಯಾಗಿ ಹೀನಾಯ ಬದುಕು ಸಾಗಿಸಬೇಕಿತ್ತು. ದಲಿತರಿಗೆ ಸ್ವಾಭಿಮಾನ ಮತ್ತು ಶಿಕ್ಷಣದ ಮಹತ್ವದ ಅರಿವು ಮೂಡಿಸಿದ್ದೇ ಬಾಬಾಸಾಹೇಬರು.

ತನ್ನ ಇಡೀ ಜೀವನವನ್ನು ಕತ್ತಲು ಮಾಡಿಕೊಂಡು ದಲಿತರಿಗೆ ಬೆಳಕಾದವರು ಅಂಬೇಡ್ಕರ್ ರವರು. ಇಡೀ ದೇಶ ಜನರು ಬ್ರಿಟೀಷರಿಂದ ತಮ್ಮ ವಿಮೋಚನೆಗಾಗಿ ಹೋರಾಟ ನಡೆಸಿದರೆ ಅಂಬೇಡ್ಕರ್ ರವರು ಈ ದೇಶದೊಳಗಿನ ಅಸಾಮಾನತೆ , ಅವಮಾನ , ಜಾತೀ ಪಧ್ಧತಿ, ಅಸ್ಪೃಶ್ಯತೆ ವಿಮೋಚನೆಗಾಗಿ ಹೋರಾಟ ನಡೆಸಿದರು. ಅವರಿಗೆ ಅದಾಗಲೇ ಮನದಟ್ಟಾಗಿತ್ತು ಬ್ರೀಟೀಷರು ಭಾರತಕ್ಕೆ ಸ್ವಾತಂತ್ರ್ಯ ಬಿಟ್ಟುಕೊಟ್ಟರೂ ಸಹ , ಇಲ್ಲಿನ ಮೇಲ್ವರ್ಗದ ಜನಗಳು ನನ್ನ ಅಸ್ಪೃಶ್ಯ ಜನಾಂಗಕ್ಕೆ ಸ್ವಾತಂತ್ರ್ಯ ಕೊಡುವುದಿಲ್ಲಾ ಎಂದು. ಆದ್ದರಿಂದ ಬಾಬಾಸಾಹೇಬರ ಋಣ ನಮ್ಮೆಲ್ಲರ ಮೇಲಿದೆ ಹಾಗಾಗಿ ಅವರು ಘೋಷಿಸಿದ ” ಶಿಕ್ಷಣ ಸಂಘಟನೆ ಹೋರಾಟ ” ಈ ಮೂರು ಘೋಷಣೆಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ಅಂಬೇಡ್ಕರ್ ಜನ್ಮದಿನಾಚರಣೆಯ ಅಧ್ಯಕ್ಷತೆಯನ್ನು ಬ್ರಹ್ಮಾವರ ತಾಲೂಕು ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರೂರು ವಿಷ್ಣುಮೂರ್ತಿ ದೇವಸ್ಥಾನದ ಮೋಕ್ತೇಸರರಾದ ಸಂತೋಷ್ ಕುಮಾರ್ ಹೆಗ್ಡೆ , ಉಡುಪಿ ಜಿಲ್ಲಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಕುಮಾರ್ ಕೋಟಾ, ಬಿರ್ತಿ ಸುರೇಶ, ವಡ್ಡರ್ಸೆ ಶ್ರೀನಿವಾಸ್, ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು , ಪ್ರಕಾಶ್ ಹೇರೂರು, ಶರತ್ ಆರೂರು, ಹರೀಶ್ಚಂದ್ರ ಬಿರ್ತಿ, ಎಸ್. ನಾರಾಯಣ್, ಗೋಪಾಲ ಗಿಳಿಯಾರು, ಶಿವಾನಂದ ಬಿರ್ತಿ, ಉಮೇಶ ಸಾಲೀಕೇರಿ, ಸಧಾನಂದ ಹಂಗಾರಕಟ್ಟೆ , ನಿಶಾನ್ ಹಂದಾಡಿ, ಸುಧಾಮ ಹಂಗಾರಕಟ್ಟೆ , ಆರೂರು ಸಂಚಾಲಕರಾದ ನರಸಿಂಹ ಅವರು ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!