ಮಂಗಳೂರು: ಏ.17ರಂದು ಸಹ್ಯಾದ್ರಿ ಕಾರ್ನಿವಲ್
ಮಂಗಳೂರು: ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಕಾಲೇಜಿನ ವ್ಯವಹಾರ ಆಡಳಿತ (ಎಂಬಿಎ) ವಿಭಾಗದ ವತಿಯಿಂದ ಏಪ್ರಿಲ್ 17ರಂದು “ಸಹ್ಯಾದ್ರಿ ಕಾರ್ನಿವಲ್ 2026” ಆಯೋಜಿಸಲಾಗಿದೆ.
ವಿದ್ಯಾರ್ಥಿಗಳ ಪ್ರತಿಭೆ, ನವೀನತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ನಿವಲ್ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಸಹ್ಯಾದ್ರಿ ವಿಜ್ ರಸಪ್ರಶ್ನೆ, ಮಾರ್ಕೆಟ್ ವರ್ಸ್ ಹಾಗೂ ಸ್ಟೂಡೆಂಟ್ ಕಾರ್ನರ್ ಕಾರ್ಯಕ್ರಮಗಳು ನಡೆಯಲಿವೆ.
ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ನಡೆದ ಸಹ್ಯಾದ್ರಿ ವಿಜ್ ರಸಪ್ರಶ್ನೆಗೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಭಟ್ಕಳ, ಬ್ರಹ್ಮಾವರ, ಕಾರವಾರ, ಕೂರ್ಗ್, ಪುತ್ತೂರು, ಸುಳ್ಯ, ಬಂಟ್ವಾಳ ಸೇರಿದಂತೆ 40 ಕಾಲೇಜುಗಳಲ್ಲಿ ಪ್ರಾಥಮಿಕ ಸುತ್ತುಗಳು ನಡೆದಿವೆ. ಸುಮಾರು 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 500 ಮಂದಿ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾರೆ.
ವಿಜೇತರಿಗೆ ನಗದು ಬಹುಮಾನವಾಗಿ ಮೊದಲ ಬಹುಮಾನ ರೂ. 25,000, ಎರಡನೇ ಬಹುಮಾನ ರೂ. 15,000, ಮೂರನೇ ಬಹುಮಾನ ರೂ. 10,000 ಹಾಗೂ ಮೂವರು ತಂಡಗಳಿಗೆ ತಲಾ ರೂ. 4,000 ಸಮಾಧಾನಕರ ಬಹುಮಾನ ನೀಡಲಾಗುತ್ತದೆ.
ಮಾರ್ಕೆಟ್‌ವರ್ಸ್ ಕಾರ್ಯಕ್ರಮದಲ್ಲಿ ಕಾವೇರಿ ಟಾಟಾ ಮೋಟಾರ್ಸ್, ರೆನಾಲ್ಟ್, ಅಥರ್, ಪೋಲಾರ್ ಬೇರ್, ಲಾಜಿಜ್ ಪಿಜ್ಜಾ, ಬಜಾಜ್, ಕೆಟಿಎಂ ಸೇರಿದಂತೆ ಸುಮಾರು 15 ಕಂಪನಿಗಳು ಸ್ಟಾಲ್‌ಗಳನ್ನು ಸ್ಥಾಪಿಸಲಿದ್ದು, ಎಂಬಿಎ ವಿದ್ಯಾರ್ಥಿಗಳಿಗೆ ಮಾರ್ಕೆಟಿಂಗ್ ಹಾಗೂ ಮಾರಾಟ ಕ್ಷೇತ್ರದ ಪ್ರಾಯೋಗಿಕ ಅನುಭವ ಲಭಿಸಲಿದೆ.
ಸ್ಟೂಡೆಂಟ್ ಕಾರ್ನರ್‌ನಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ನಿರ್ವಹಿಸಲ್ಪಡುವ 15 ಸ್ಟಾಲ್‌ಗಳು ಇರಲಿದ್ದು, ಆಹಾರ ಪದಾರ್ಥಗಳು, ಫ್ಯಾಷನ್ ಪರಿಕರಗಳು, ಕೈತಯಾರಿಕಾ ವಸ್ತುಗಳು, ಜೀವನಶೈಲಿ ಉತ್ಪನ್ನಗಳು ಮತ್ತು ಮನರಂಜನಾ ಚಟುವಟಿಕೆಗಳು ಗಮನಸೆಳೆಯಲಿವೆ. ಹೆಚ್ಚಿನ ಆದಾಯ ಗಳಿಸುವ ಸ್ಟಾಲ್‌ಗೆ ಬಹುಮಾನ ನೀಡಲಾಗುತ್ತದೆ.
ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆತ್ಮೀಕ ಅಮೀನ್ ಉದ್ಘಾಟಿಸಲಿದ್ದು, ಹಳೆ ವಿದ್ಯಾರ್ಥಿ ಅತಿಥಿಯಾಗಿ ರಕ್ಷಾ ಪಿ ಚಿಲಿಂಬಿ ಭಾಗವಹಿಸಲಿದ್ದಾರೆ. ಟ್ರಸ್ಟಿಗಳಾದ ದೇವದಾಸ್ ಹೆಗ್ಡೆ,Devadas Hegde ಹಾಗೂ ಜಗನ್ನಾಥ ಚೌಟ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.





