ಉಡುಪಿ: ರೋಬೋ ಸಾಫ್ಟ್‌ ನಲ್ಲಿ ಬೆಂಕಿ ಅವಘಡ – ಲಕ್ಷಾಂತರ ರೂ. ನಷ್ಟ

ಉಡುಪಿ: (ಉಡುಪಿ ಟೈಮ್ಸ್ ವರದಿ) ನಗರದ ಹೊರ ವಲಯದ ಸಂತೆಕಟ್ಟೆಯಲ್ಲಿ ಕಾರ್ಯಚರಿಸುತ್ತಿರುವ ರೋಬೋ ಸಾಫ್ಟ್‌ನಲ್ಲಿ ಶುಕ್ರವಾರ ತಡ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಸಂತೆಕಟ್ಟೆ ರಾಪ್ಷ್ರೀಯ ಹೆದ್ದಾರಿ ಬಳಿ ಇರುವ ಸಾಫ್ಟ್‌ವೇರ್ ಕಂಪೆನಿಯ ತಳ ಮಹಡಿಯ ವಿದ್ಯುತ್ ಶಾರ್ಟ್ ನಿಂದ ರಾತ್ರಿ 12.45ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಭದ್ರತಾ ಸಿಬಂದಿಗಳು ಉಡುಪಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.
ಅಗ್ನಿಶಾಮಕ ದಳದ ಮುಖ್ಯಧಿಕಾರಿ ತಿಪ್ಪೆಸ್ವಾಮಿ ಜಿ. ನೇತೃತ್ವದಲ್ಲಿ ಹದಿನೈದು ಸಿಬಂದಿಗಳು ಸುಮಾರು ಒಂದುವರೆ ತಾಸು ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರು.

ಆದರೂ ಬೆಂಕಿ ಕಾಣಿಸಿಕೊಂಡ ಸ್ಥಳವು ಮುಖ್ಯ ಸರ್ವರ್ ಕೊಠಡಿಯಾದ್ದರಿಂದ ಲಕ್ಷಾಂತರ ಮೌಲ್ಯದ ಕಂಪ್ಯೂಟರ್, ಪಿಠೋಪಕರಣ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದ್ದರಿಂದ ಕಟ್ಟಡವಿಡಿ ಹೊಗೆಯಿಂದ ಬೆಳಿಗ್ಗೆ ತನಕ ತುಂಬಿತ್ತು ಎಂದು ತಿಳಿದು ಬಂದಿದೆ.

ಸಾಫ್ಟ್‌ವೇರ್ ಸಿಬಂದಿಗಳಿಗೆ ವರ್ಕ್ ಫ್ರಮ್ ಹೋಮ್ ಇರುವುದರಿಂದ ಯಾವುದೇ ಹಾನಿ ಸಂಭವಿಸಿಲ್ಲವವೆಂದು ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್ “ಉಡುಪಿ ಟೈಮ್ಸ್” ಗೆ ತಿಳಿಸಿದ್ದಾರೆ.

ಅವಘಡದಿಂದ 60 ಲಕ್ಷಕ್ಕೂ ಹೆಚ್ಚೂ ನಷ್ಟ ಸಂಭವಿಸರಬಹುದೆಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!