ಕುಂದಾಪುರ: ಟ್ರೆಕ್ಕಿಂಗ್ ಹೋಗಿದ್ದ ಮೆಡಿಕಲ್ ಶಾಪ್ ಮಾಲಕಿ ನದಿಯಲ್ಲಿ‌ ಮುಳುಗಿ ಮೃತ್ಯು

ಉಡುಪಿ: ಹೊಸಂಗಡಿಯ ಭಾಗಿಮನೆ ಬಳಿ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ನಡೆದಿದೆ.

ಕುಂದಾಪುರದ ಮೆಡಿಕಲ್ ಶಾಪ್ ವೊಂದರ ಮಾಲಕಿ ಶುಭಶ್ರೀ ಕಾರಂತ್ (53) ಮೃತಪಟ್ಟ ಮಹಿಳೆ.ಕುಂದಾಪುರದಿಂದ 8-10 ಜನರ ತಂಡ ಹೊಸಂಗಡಿಯ ಮೆಟ್ಕಲ್ ಗುಡ್ಡ ಕಡೆಗೆ ಟ್ರೆಕ್ಕಿಂಗ್ ಹೋಗಿದ್ದರು. ಈ ವೇಳೆ ಶುಭಶ್ರೀ‌ ಅವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!