ಕಾಪು ಹೊಸ ಮಾರಿಗುಡಿ ದೇವಸ್ಥಾನ: ಮಾರಿಯಮ್ಮ ದೇವಿಯ ಪುನ:ಪ್ರತಿಷ್ಠೆಯ ವರ್ಧಂತಿ ಮಹೋತ್ಸವ ಧಾರ್ಮಿಕ, ಸಾಂಸ್ಕೃತಿಕ ಮಾತೃ ವೈಭವ

Oplus_131072

ಕಾಪು: ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ಪುನ:ಪ್ರತಿಷ್ಠೆಯ ಪ್ರಥಮ ವರ್ಧಂತಿ ಮಹೋತ್ಸವ ಅಂಗವಾಗಿ 3 ದಿನಗಳ ಮಾತೃ ವೈಭವ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ನೀಡಲಾಯಿತು.

ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ.ಪಿ ಕುಮಾರಗುರು ತಂತ್ರಿಗಳ ನೇತೃತ್ತದಲ್ಲಿ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಸಹಭಾಗಿ-ತ್ವದಲ್ಲಿ ಅಭಿವೃದ್ಧಿ ಸಮಿತಿ ಮತ್ತು ಮಾತೃ ವೈಭವ ಸೇವಾ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಅವರ ಯಜಮಾನತ್ವದೊಂದಿಗೆ ಸಾಮೂಹಿಕ ಪ್ರಾರ್ಥನೆ ಮೂಲಕ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿತು.

ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಮಂಜುಳಾ ಟಿ.ಎನ್. ಶ್ರುತಿ ಹರಿರಾಮ್‌ಶಂಕರ್, ಬೀನಾ ವಾಸುದೇವ ಶೆಟ್ಟಿ, ರಂಜನಿ ಸುಧಾಕರ ಹೆಗ್ಡೆ ತುಂಗಾ, ಅನುರಾಧ ಮನೋಹ‌ರ್ ಶೆಟ್ಟಿ, ಮಮತಾ ಯೋಗೀಶ್ ಶೆಟ್ಟಿ, ವಿದ್ಯಾ ರವಿಕಿರಣ್, ಲಕ್ಷ್ಮೀ ಶ್ರೀನಿವಾಸ ತಂತ್ರಿ, ಸುಗುಣಾ ರತ್ನಾಕ‌ರ್ ಶೆಟ್ಟಿ ನಡಿಕೆರೆ ಸೇರಿದಂತೆ 81 ಮಹಿಳೆಯರು ಮಾತೃ ವೈಭವ ದೀಪ ಬೆಳಗಿದರು. ಬಳಿಕ ಅರಣಿಮಥನ, ಗಣಯಾಗ, ನವಗ್ರಹ ಹೋಮ, ಮೃತ್ಯುಪಂಚಕ ಪೂಜೆ, ಶ್ರೀ ಚಂಡೀಪುರಶ್ಚರಣ ಹಾಗೂ ಸಂಜೆ ವಾಸ್ತುಹೋಮ, ವಾಸ್ತು ಪೂಜೆ, ಸುದರ್ಶನ ರಕ್ಷಾ ಪ್ರಕ್ರಿಯೆ ನಡೆಯಿತು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಶಾಸಕ ಸುರೇಶ್ ಬಾಬು ಚಿಕ್ಕನಾಯಕಹಳ್ಳಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಶ್ರೀಹೊಸ ಮಾರಿಗುಡಿ ದೇವಸ್ಥಾನದ ಕಾರ್ಯ-ನಿರ್ವಹಣಾಧಿಕಾರಿ ರವಿ ಕಿರಣ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆ‌ರ್. ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಮನೋಹರ ಎಸ್. ಶೆಟ್ಟಿ, ಗಂಗಾಧರ ಸುವರ್ಣ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಮುಂಬಯಿ ಸಮಿತಿ ಗೌರವಾಧ್ಯಕ್ಷ ಸುಧಾಕರ ಹೆಗ್ಡೆ ತುಂಗಾ ಗ್ರೂಪ್ಸ್, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದ‌ರ್ ಶೆಟ್ಟಿ, ಮಾತೃ ವೈಭವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಬಾಲಾಜಿ, ಕಾರ್ಯಾಧ್ಯಕ್ಷರಾದ ಭಗವಾನ್ ದಾಸ್ ಶೆಟ್ಟಿಗಾರ್, ಪ್ರಭಾಕರ ಎಸ್. ಪೂಜಾರಿ, ಹರಿಯಪ್ಪ ಕೋಟ್ಯಾನ್, ಲಕ್ಷ್ಮೀಶ ತಂತ್ರಿ ಕಲ್ಯ, ಕಾರ್ಯದರ್ಶಿ ಜಯರಾಮ ಆಚಾರ್ಯ,ಮೊತ್ತೇಸರರಾದ ಶೇಖರ್ ಸಾಲ್ಯಾನ್, ಮನೋಹರ ರಾವ್ ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ದೇವಾಡಿಗ, ಮುಂಬಯಿ ಸಮಿತಿಯ ಸಂದೀಪ್ ಶೆಟ್ಟಿ ಮುಂಬಯಿ, ರಮೇಶ್ ಶೆಟ್ಟಿ, ಪಾಂಡು ಶೆಟ್ಟಿ, ವಸಂತ ಶೆಟ್ಟಿ, ಪ್ರೇಮನಾಥ ಶೆಟ್ಟಿ, ಆ‌ರ್.ಜಿ. ಶೆಟ್ಟಿ, ಅಶ್ವಿನ್ ಶೆಟ್ಟಿ, ಸ್ಥಳೀಯ ಸಮಿತಿ ಪ್ರಮುಖರಾದ ಶ್ರೀಕರ ಶೆಟ್ಟಿ ಕಲ್ಕ, ವಿಕ್ರಂ ಕಾಪು, ನಿರ್ಮಲ್ ಕುಮಾ‌ರ್ ಹೆಗ್ಡೆ, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ಸಾವಿತ್ರಿ ಗಣೇಶ್, ಸುರೇಶ್ ಶೆಟ್ಟಿ ಅಯೋಧ, ರಮೇಶ್ ಶೆಟ್ಟಿ ಕೊಲ್ಯ, ಪ್ರಶಾಂತ್ ಶೆಟ್ಟಿ, ಸುಧಾಕರ ಶೆಟ್ಟಿ ಮಕರ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!