ಇರಾನ್ ದಾಳಿ ಬಳಿಕ ಗಲ್ಫ್‌ ನಲ್ಲಿ ಉದ್ವಿಗ್ನತೆ: ಸೌದಿ ಅರೇಬಿಯಾದ ರಿಯಾದ್‌‌ನಲ್ಲಿ ಸ್ಫೋಟ

ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿದಾಳಿ ನಡೆಸಿದ್ದನ್ನು ದೃಢಪಡಿಸಿದ ಇರಾನ್
ರಿಯಾದ್ ಫೆ .28: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ಸ್ಫೋಟಗಳು ಸಂಭವಿಸಿರುವುದಾಗಿ ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಫೋಟಗಳ ಸ್ವರೂಪ, ಹಾನಿ ಮತ್ತು ಕಾರಣಗಳ ಕುರಿತು ತಕ್ಷಣದ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

ಇದೇ ವೇಳೆ ಗಲ್ಫ್ ಪ್ರದೇಶದಲ್ಲಿನ ಪ್ರಮುಖ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ದೃಢಪಡಿಸಿದೆ. ಖತರ್ ನಲ್ಲಿರುವ ಅಲ್-ಉದೈದ್ ವಾಯುನೆಲೆ, ಕುವೈತ್ ನ ಅಲ್-ಸಲೇಂ ವಾಯುನೆಲೆ, ಯುಎಇಯ ಅಲ್-ದಫ್ರಾ ವಾಯುನೆಲೆ ಹಾಗೂ ಬಹ್ರೇನ್‌ ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ನೆಲೆಯನ್ನು ಇರಾನ್ ಕ್ಷಿಪಣಿ ದಾಳಿಗೆ ಗುರಿಯಾಗಿಸಲಾಗಿದೆ ಎಂದು ಇರಾನಿನ FARS ಸುದ್ದಿ ಸಂಸ್ಥೆ ತಿಳಿಸಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾನ್ ಮೂಲಗಳು ಹೇಳಿವೆ. ಬಹ್ರೇನ್ ನ ರಾಜಧಾನಿ ಮನಾಮಾದಲ್ಲಿರುವ ಯುಎಸ್ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆದ ನಂತರ ಜೋರಾದ ಸ್ಫೋಟ ಕೇಳಿಬಂದಿರುವುದಾಗಿ ಎಎಫ್ಪಿ ಮತ್ತೊಂದು ವರದಿಯಲ್ಲಿ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಖತರ್ ನ ರಕ್ಷಣಾ ಸಚಿವಾಲಯ, ದೇಶದ ಪ್ರದೇಶವನ್ನು ಗುರಿಯಾಗಿಸಿಕೊಂಡು ನಡೆಸಲಾದ ಹಲವಾರು ದಾಳಿಗಳನ್ನು ಯಶಸ್ವಿಯಾಗಿ ಇಂಟರ್ಸೆಪ್ಟರ್ ಮೂಲಕ ವಿಫಲಗೊಳಿಸಲಾಗಿದೆ ಎಂದು ತಿಳಿಸಿದೆ. “ಇಂಟರ್ಸೆಪ್ಟರ್ ಮೂಲಕ ಕ್ಷಿಪಣಿಗಳು ಖತರ್ ತಲುಪುವ ಮೊದಲು ತಡೆಹಿಡಿಯಲಾಗಿದೆ,” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!