ಉಡುಪಿ: ಬಸ್ ಏಜೆಂಟ್‌ ಆತ್ಮಹತ್ಯೆ

ಉಡುಪಿ, ಫೆ,11: ಬನ್ನಂಜೆ ಗರಡಿ ಸಂಪರ್ಕಿಸುವ ರಸ್ತೆ ಸನಿಹ ಬಸ್ ಏಜೆಂಟೊಬ್ಬರು‌, ಮನೆಯ‌ ಹತ್ತಿರದ ಬಾವಿಗೆ ಜಿಗಿದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ.

ಮೃತ ವ್ಯಕ್ತಿ ಕೆ. ರಾಜೇಶ್ ಶೆಣೈ ಎಂದು‌ ತಿಳಿದುಬಂದಿದೆ.

    ಶವವನ್ನು  ಬಾವಿಯಿಂದ ಮೇಲೆತ್ತುವ ಕಾರ್ಯಚರಣೆ ಈಶ್ವರ್ ಮಲ್ಪೆ ಅವರ ತಂಡದವರಿಂದ ನಡೆಯಿತು. ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು. ನಗರ ಪೋಲಿಸ್ ಠಾಣೆಯ ಎಸ್. ಐ ನಾರಾಯಣ, ಹೆಡ್ ಕಾನ್ಸ್ಟೇಬಲ್ ನೇತಾವತಿ ಕಾನೂನು ಪ್ರಕ್ರಿಯೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!