2026-27ರ ಕೇಂದ್ರ ಬಜೆಟ್: ಬಂಡವಾಳ ಹೂಡಿಕೆ,ಉದ್ಯೋಗ ಮತ್ತು ಉತ್ಪಾದನೆಯಿಂದ ಬೆಳವಣಿಗೆಗೆ ಶಕ್ತಿ ತುಂಬಲು ಒತ್ತು

ದೇಶದಲ್ಲಿರುವ ಡೇಟಾ ಸೆಂಟರ್‌ಗಳನ್ನು ಬಳಸಿಕೊಂಡು ವಿಶ್ವಾದ್ಯಂತ ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ವಿದೇಶಿ ಕಂಪನಿಗಳಿಗೆ 2047 ರವರೆಗೆ ತೆರಿಗೆ ರಜೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಪ್ರಸ್ತಾಪಿಸಿದ್ದಾರೆ.

ಕೆಲವು ಷರತ್ತುಗಳಿಗೆ ಒಳಪಟ್ಟು ಸಂಬಂಧಪಟ್ಟ ಘಟಕಗಳಿಗೆ ತೆರಿಗೆ ರಜೆಯನ್ನು ವಿಸ್ತರಿಸಲಾಗುವುದು.

2026-27 ರ ಕೇಂದ್ರ ಬಜೆಟ್ ಭಾಷಣದಲ್ಲಿ, ನಿರ್ಣಾಯಕ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ಮತ್ತು ಡೇಟಾ ಸೆಂಟರ್‌ಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಸೀತಾರಾಮನ್ ಹೇಳಿದರು.

“ಭಾರತದ ಡೇಟಾ ಸೆಂಟರ್ ಸೇವೆಗಳನ್ನು ಬಳಸಿಕೊಂಡು ಜಾಗತಿಕವಾಗಿ ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ಯಾವುದೇ ವಿದೇಶಿ ಕಂಪನಿಗೆ 2047 ರವರೆಗೆ ತೆರಿಗೆ ರಜೆ ನೀಡಲು ನಾನು ಪ್ರಸ್ತಾಪಿಸುತ್ತೇನೆ” ಎಂದು ಸಚಿವರು ಹೇಳಿದರು.

ತೆರಿಗೆ ರಜೆಯನ್ನು ಪಡೆಯಲು, ಕಂಪನಿಗಳು ಭಾರತೀಯ ಮರುಮಾರಾಟಗಾರರ ಘಟಕದ ಮೂಲಕ ಭಾರತೀಯ ಗ್ರಾಹಕರಿಗೆ ಸೇವೆಗಳನ್ನು ಒದಗಿಸಬೇಕಾಗುತ್ತದೆ.

ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗಾಗಿ SHE-MART ಆರಂಭ

ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗಾಗಿ ‘SHE-MART’ ಆರಂಭವಾಗಲಿದೆ.

ಗ್ರಾಮೀಣ ಮಹಿಳೆಯರು ನಡೆಸುವ, ಸ್ವ-ಸಹಾಯ ಉದ್ಯಮಗಳು ಅಂದರೆ ಶಿ-ಮಾರ್ಟ್‌ಗಳನ್ನು ಪ್ರಾರಂಭಿಸಲಾಗುವುದು. ಇದು ಮಹಿಳೆಯರು ಇಂಡಿಪೆಂಡೆಂಟ್‌ ಆಗಲು ಸಹಾಯಕವಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಆದಾಯದ ತಪ್ಪು ವರದಿ ಮಾಡುವ ಬಗ್ಗೆ ದೊಡ್ಡ ಘೋಷಣೆ

ಆದಾಯ ತಪ್ಪು ವರದಿ ಮಾಡಿದರೆ ತೆರಿಗೆ ಮೊತ್ತದ 100% ರಷ್ಟು ದಂಡ ವಿಧಿಸಲಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

17 ಜೀವರಕ್ಷಕ ಔಷಧಿಗಳಿಗೆ ಕಸ್ಟಮ್ಸ್ ಸುಂಕವಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

20 ಹೊಸ ರಾಷ್ಟ್ರೀಯ ಜಲಮಾರ್ಗ ಆರಂಭಿಸಲು ಯೋಜನೆ

ಮುಂದಿನ 5 ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಆರಂಭಿಸಲು ಸರ್ಕಾರ ಯೋಜಿಸಿದೆ.

ಜಲಮಾರ್ಗಗಳ ಆರಂಭಕ್ಕೆ ತರಬೇತಿ ಸಂಸ್ಥೆಗಳ ಸ್ಥಾಪನೆ.

ಒಳನಾಡಿನ ಜಲಮಾರ್ಗಗಳನ್ನು ಪೂರೈಸುವ ಹಡಗು ದುರಸ್ತಿ ಪರಿಸರ ವ್ಯವಸ್ಥೆಯನ್ನು ವಾರಣಾಸಿ ಮತ್ತು ಪಾಟ್ನಾದಲ್ಲಿ ಸ್ಥಾಪಿಸಲಾಗುವುದು.

ಕರಾವಳಿ ಸಾಗಣೆ ಮತ್ತು ಒಳನಾಡಿನ ಜಲಮಾರ್ಗಗಳ ಪಾಲನ್ನು ಹೆಚ್ಚಿಸಲು ಕರಾವಳಿ ಸರಕು ಯೋಜನೆಯನ್ನು ಪ್ರಾರಂಭ.

ದೇಶದ ಮೂಲೆ ಮೂಲೆಗಳನ್ನು ತಲುಪಲು ಸೀಪ್ಲೇನ್‌ಗಳ ತಯಾರಿಕೆಗೆ ಬೆಂಬಲ

16ನೇ ಹಣಕಾಸು ಆಯೋಗಕ್ಕೆ ಒಪ್ಪಿಗೆ

16 ನೇ ಹಣಕಾಸು ಆಯೋಗದ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಶೇ.41 ತೆರಿಗೆ ವಿಕೇಂದ್ರೀಕರಣ ಸೂತ್ರವನ್ನು ಉಳಿಸಿಕೊಂಡಿದೆ.

20 ಹೊಸ ರಾಷ್ಟ್ರೀಯ ಜಲಮಾರ್ಗ ಆರಂಭಿಸಲು ಯೋಜನೆ

ಮುಂದಿನ 5 ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಆರಂಭಿಸಲು ಸರ್ಕಾರ ಯೋಜಿಸಿದೆ.

ಜಲಮಾರ್ಗಗಳ ಆರಂಭಕ್ಕೆ ತರಬೇತಿ ಸಂಸ್ಥೆಗಳ ಸ್ಥಾಪನೆ.

ಒಳನಾಡಿನ ಜಲಮಾರ್ಗಗಳನ್ನು ಪೂರೈಸುವ ಹಡಗು ದುರಸ್ತಿ ಪರಿಸರ ವ್ಯವಸ್ಥೆಯನ್ನು ವಾರಣಾಸಿ ಮತ್ತು ಪಾಟ್ನಾದಲ್ಲಿ ಸ್ಥಾಪಿಸಲಾಗುವುದು.

ಕರಾವಳಿ ಸಾಗಣೆ ಮತ್ತು ಒಳನಾಡಿನ ಜಲಮಾರ್ಗಗಳ ಪಾಲನ್ನು ಹೆಚ್ಚಿಸಲು ಕರಾವಳಿ ಸರಕು ಯೋಜನೆಯನ್ನು ಪ್ರಾರಂಭ.

ದೇಶದ ಮೂಲೆ ಮೂಲೆಗಳನ್ನು ತಲುಪಲು ಸೀಪ್ಲೇನ್‌ಗಳ ತಯಾರಿಕೆಗೆ ಬೆಂಬಲ.

ಹೊಸ ತೆರಿಗೆ ಪದ್ಧತಿ 2026ರ ಏಪ್ರಿಲ್‌ನಿಂದ ಜಾರಿ

  • ಅನಿವಾಸಿ ಭಾರತೀಯ ಸ್ತಿರಾಸ್ಥಿ ಮೇಲಿನ ತೆರಿಗೆ ಕಡಿತ.
  • ವಿದೇಶ ಯಾತ್ರೆಗಳ ಟಿಸಿಎಂಸ್ ಕಡಿತ.
  • ಅಪಘಾತ ವಿಮೆಗಿನ್ನು ಟಿಡಿಎಸ್ ಇರುವುದಿಲ್ಲ.
  • ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲ.
  • ಮಾ.31ರ ತನಕ ತೆರಿಗೆ ಸಲ್ಲಿಸಲು ಅನುವು.
  • ಹೊಸ ಆದಾಯ ತೆರಿಗೆ ಕಾನೂನು ಜಾರಿ.

ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮೇಲಿನ ವೆಚ್ಚ 40,000 ಕೋಟಿ ರೂ.ಗೆ ಹೆಚ್ಚಳ

ಕೇಂದ್ರ ಹಣಕಾಸುವ ಸಚಿವ ನಿರ್ಮಲಾ ಸೀತಾರಾಮನ್ ಅವರು ಭಾನುವಾರ 2026-27ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಮೇಲಿನ ವೆಚ್ಚವನ್ನು 40,000 ಕೋಟಿ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾಪ ಮಾಡಿದ್ದಾರೆ.

ಇಂದು ಲೋಕಸಭೆಯಲ್ಲಿ 9ನೇ ಬಾರಿ ಬಜೆಟ್ ಮಂಡಿಸದ ನಿರ್ಮಲಾ ಸೀತಾರಾಮನ್ ಅವರು, ಕಾಪಿಟಲ್ ಸರಕುಗಳ ಉತ್ಪಾದನೆಗೆ ಉತ್ತೇಜನ ನೀಡಲು ಎರಡು ಸ್ಥಳಗಳಲ್ಲಿ ಹೈಟೆಕ್ ಟೂಲ್ ರೂಮ್ ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಜಾಗತಿಕವಾಗಿ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ರಚಿಸಲು ಕಂಟೇನರ್ ತಯಾರಿಕೆಗೆ ಸೀತಾರಾಮನ್ ಒಂದು ಯೋಜನೆಯನ್ನು ಸಹ ಪ್ರಸ್ತಾಪಿಸಿದರು.

Leave a Reply

Your email address will not be published. Required fields are marked *

error: Content is protected !!