ಫೆ.3: “ವಿಜಯಲಕ್ಷ್ಮೀ” ಅಲಯನ್ಸ್ ಉಡುಪಿ ಜಿಲ್ಲಾ ಸಮ್ಮೇಳನ
ಉಡುಪಿ: 2025ರಲ್ಲಿ ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಅಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಅಲಯನ್ಸ್ ಜಿಲ್ಲೆ 275 ಎಸ್ ಇದರ ಪ್ರಥಮ ಜಿಲ್ಲಾ ಸಮ್ಮೇಳನ “ವಿಜಯಲಕ್ಷ್ಮೀ” ಫೆಬ್ರವರಿ 3 ರಂದು ಉಡುಪಿ ಟೌನ್ ಹಾಲ್ ನಲ್ಲಿ ನಡೆಯಲಿದೆ.

ಅಲಯನ್ಸ್ ಜಿಲ್ಲೆ 275 ಎಸ್ ಇದರ ಜಿಲ್ಲಾ ಗವರ್ನರ್ ಅಲೈ ಸುನೀಲ್ ಸಾಲ್ಯಾನ್ ಕಡೆಕಾರ್ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದು ಅಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಸಂಸ್ಥಾಪಕರಾದ ಅಲೈ ತಿರುಪತಿ ರಾಜು ಅವರು ಮುಖ್ಯಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ. ಅಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕರಾದ ಅಲೈ ಡಾ. ನಾಗರಾಜ್ ಬೈರಿ, ಅಂತಾರಾಷ್ಟ್ರೀಯ ಕಮಿಟಿ ಸದಸ್ಯ ಅಲೈ ಕೆ.ಎಂ ಮುನಿಯಪ್ಪ ಅವರ ಘನ ಉಪಸ್ಥಿತಿ ಇರಲಿದೆ.
ಏಪ್ರಿಲ್‌ನಿಂದ ಆರಂಭವಾಗಲಿರುವ 2026-2027 ಅಲಯನ್ಸ್ ವರುಷದ ಜಿಲ್ಲಾ ಗವರ್ನರ್ ಸ್ಥಾನಕ್ಕೆ ಅಲೈ ಸುನೀಲ್ ಕುಮಾರ್ ಶೆಟ್ಟಿ, ಪ್ರಥಮ ಉಪ ಜಿಲ್ಲಾ ಗವರ್ನರ್ ಸ್ಥಾನಕ್ಕೆ ಅಲೈ ಸುಧಾಕರ್ ಹೆಗ್ಡೆ ಮತ್ತು ದ್ವಿತೀಯ ಉಪ ಜಿಲ್ಲಾ ಗವರ್ನರ್ ಸ್ಥಾನಕ್ಕೆ ಅಲೈ ಡಾ. ಅಶೋಕ್ ಕುಮಾರ್ ವೈ.ಜಿ ಅವರು ಸ್ಪರ್ಧಿಸಲಿದ್ದಾರೆ ಎಂದು ಜಿಲ್ಲಾ ಪಿ.ಆರ್. ಓ ಅಲೈ ಜಯರಾಮ ಆಚಾರ್ಯ ಸಾಲಿಗ್ರಾಮ ತಿಳಿಸಿದ್ದಾರೆ.





