ಆರ್‌ಎಸ್‌ಎಸ್‌ನವರು ಲಾಠಿ ಹಿಡಿದರೆ ತಪ್ಪೇನು?- ಸಿ.ಟಿ.ರವಿ

ಹುಬ್ಬಳ್ಳಿ : ಲಾಠಿ ನಿಷೇಧಿತ ಅಸ್ತ್ರವಲ್ಲ. ಲಾಠಿ ದೇಶ ಭಕ್ತರಿಗೆ ಆತ್ಮವಿಶ್ವಾಸ ಮೂಡಿಸುತ್ತೆ. ಆರ್‌ಎಸ್‌ಎಸ್‌ನವರು ಲಾಠಿ ಹಿಡಿದರೆ ತಪ್ಪೇನು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು. ನಂತರ ಮಾತನಾಡಿದ ಅವರು, ಲಾಠಿ ನಿಷೇಧಿತ ಅಸ್ತ್ರವಲ್ಲ. ದೇಶದ್ರೋಹಿಗಳ ಸಂಘರ್ಷಕ್ಕೆ ಲಾಠಿ ಹಿಡಿಯಲಾಗುತ್ತೆ ಎಂದು ದನ ಕಾಯೋರ ರೀತಿ ಲಾಠಿ ಹಿಡಿಯಲಾಗುತ್ತೆ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ದನ ಕಾಯೋದು ಕೆಟ್ಟ ಕೆಲಸ ಅಲ್ಲ. ಶ್ರೀಕೃಷ್ಣನೇ ದನ ಕಾದಿದ್ದಾನೆ. ದನ ಕಾಯೋದು ಅಪರಾಧವಾ..?. ನಾವು ದನ ಕಾಯ್ದೇ ಬಂದಿದ್ದೇನೆ. ಅವರಿಗೆ ‌ಕಾಯಕ ಸಂಸ್ಕೃತಿ ಗೊತ್ತಿಲ್ಲ. ಅವರಿಗೆ ಮೋಸ, ವಂಚನೆ, ಜಗಳ ಹಚ್ಚೋದಷ್ಟೇ ಗೊತ್ತು. ಅರಿವಿಲ್ಲದೆ ಇರೋರಿಗೆ ಅರಿವು ಮೂಡಿಸಬಹುದು. ಜಾಣ ಕುರುಡರಿಗೆ ಮೂಡಿಸೋದು ಕಷ್ಟ. ಶಾಖೆಗೆ ಬಂದ್ರೆ ಶಾಖೆ ಏನು ಅಂತ ಅರ್ಥವಾಗುತ್ತದೆ. ಅಲ್ಲಿ ಯಾರು ಬೇಕಾದ್ರು ಬರಬಹುದು. ಗುತ್ತಿಗೆದಾರರು ಪತ್ರದ ಮೇಲೆ ಪತ್ರ ಬರೆಯುತ್ತಿದ್ದಾರೆ.

ಪತ್ರ ಬರೆದೋರಿಗೆ ಬೆದರಿಕೆ ಹಾಕ್ತಿದ್ದಾರೆ. ಗುಂಡಿಗಳ ಬಗ್ಗೆ ಕೇಳಿದ್ರೆ ಅವರಿಗೆ ಬೆದರಿಕೆ ಹಾಕ್ತಿದ್ದಾರೆ. ಮಾಡೋ ಕೆಲಸ ಬಿಟ್ಟು ಉಳಿದೆಲ್ಲವನ್ನು ಮಾಡ್ತಿದ್ದಾರೆ. ಹೀಗಾಗಿ ಗೂಗಲ್ ಎಐ ಹಬ್ ಬೇರೆ ರಾಜ್ಯಕ್ಕೆ ಹೋಯ್ತು. ಬಿಹಾರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುತ್ತದೆ. ಈಗಾಗಲೇ ಯುಪಿಎ ಸೋಲಿಗೆ ಕಾರಣ ಸಿದ್ದಮಾಡಿಟ್ಟುಕೊಂಡಿದೆ. ಪ್ರಶಾಂತ್ ಕಿಶೋರ್ ಯಾರ ಮತ ಕಿತ್ತುಕೊಳ್ತಾರೆ ಅನ್ನೋದು ಮುಂದೆ ಗೊತ್ತಾಗುತ್ತೆ ಎಂದು ಸಿ.ಟಿ.ರವಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!